February 3, 2026

ಸದಸ್ಯತ್ವ ಹೆಚ್ಚಿಸುವ ಕಾರ್ಯಕರ್ತರಿಗೆ ಬಂಪರ್ ಬಹುಮಾನ ಘೋಷಿಸಿದ ಕಾಂಗ್ರೆಸ್: ವ್ಯಂಗ್ಯವಾಡಿದ ಬಿಜೆಪಿ‌

0
image_editor_output_image-1805648021-1647073459530.jpg

ಬಾಗಲಕೋಟೆ: ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸುವ ಕ್ಷೇತ್ರದಲ್ಲಿ ಸದಸ್ಯತ್ವ ಹೆಚ್ಚಿಸುವ ಕಾರ್ಯಕರ್ತರಿಗೆ ಕಾಂಗ್ರೆಸ್ ಬಂಪರ್ ಬಹುಮಾನಗಳನ್ನು ಘೋಷಿಸಿದ್ದು, ಟೀಕೆಗೆ ಗುರಿಯಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ತಯಾರಿ ಈಗಿಂದಲೇ ಶುರುವಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸುವ ಬಾದಾಮಿ ಕ್ಷೇತ್ರದಲ್ಲಿ ಸದಸ್ಯತ್ವ ಹೆಚ್ಚಿಸುವ ಕಾರ್ಯಕರ್ತರಿಗೆ ಪ್ರಿಡ್ಜ್, ಎಲ್ ಇಡಿ ಟಿವಿ, ಮೊಬೈಲ್ ನಂತಹ ಬಹುಮಾನಗಳನ್ನು ಘೋಷಿಸಿದೆ. ಐದು ಸಾವಿರ ಸದಸ್ಯತ್ವಕ್ಕೆ ಪ್ರಿಡ್ಜ್, ಮೂರು ಸಾವಿರ ಸದಸ್ಯತ್ವಕ್ಕೆ ಎಲ್ ಇಡಿ ಟಿವಿ ಮತ್ತು ಎರಡು ಸಾವಿರ ಸದಸ್ಯರನ್ನು ಪಕ್ಷಕ್ಕೆ ಸೇರಿಸಿದರೆ ಮೊಬೈಲ್ ಬಹುಮಾನವಾಗಿ ನೀಡುವುದಾಗಿ ಹೇಳಲಾಗಿದೆ ಎನ್ನಲಾಗಿದೆ. ಈ ಅಭಿಯಾನ ಮಾರ್ಚ್ 1ರಿಂದಲೇ ಆರಂಭವಾಗಿದ್ದು, 31ರವರೆಗೆ ಮುಂದುವರಿಯಲಿದೆ.

ಇಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ನಡೆಸುತ್ತಾರೆಯೇ ಎಂಬುದು ತಿಳಿದುಬಂದಿಲ್ಲ. ಆದರೆ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಂಡು ಮತ್ತೆ ಅವರನ್ನು ಕಣಕ್ಕಿಳಿಸಿಕೊಳ್ಳುವುದು ಅವರ ಬೆಂಬಲಿಗರ ಯೋಚನೆಯಾಗಿದ್ದು, ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸೆಳೆಯುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ನ ಈ ಆಫರ್ ಕುರಿತು ವ್ಯಂಗ್ಯವಾಡಿರುವ ಬಿಜೆಪಿ, 137 ವರ್ಷ ಇತಿಹಾಸ ಇರುವ ರಾಷ್ಟ್ರೀಯ ಪಕ್ಷಕ್ಕೆ ಇದೆಂತಾ ದುರ್ಗತಿ ಎಂದಿದೆ.

Leave a Reply

Your email address will not be published. Required fields are marked *

error: Content is protected !!