February 1, 2026

ಝಮೀರ್ ಅಹ್ಮದ್ ಆಪ್ತನಿಂದ ಮಹಿಳಾ ಪತ್ರಕರ್ತೆಗೆ ದೋಖ:
ನಿಕಾ ದಿನವೇ ಕೈ ಕೊಟ್ಟ ಜಮೀರ್ ಆಪ್ತ ಮಿಸ್ಬಾ ಮುಖರ್ರಮ್

0
IMG-20211028-WA0003.jpg

ಬೆಂಗಳೂರು: ಮಾಜಿ ಮಂತ್ರಿ, ಕಾಂಗ್ರೆಸ್ ಮುಖಂಡ ಎ ಜಡ್ ಝಮೀರ್ ಅಹಮದ್ ಖಾನ್ ಆಪ್ತ ನೊಬ್ಬನ ವಂಚನೆಗೆ ಮಹಿಳಾ ಪತ್ರಕರ್ತೆಯೊಬ್ಬಳು ಒಳಗಾಗಿದ್ದು, ಈ ಪ್ರಕರಣ ಸಂಬಂದಿಸಿದಂತೆ ನ್ಯಾಯಕ್ಕಾಗಿ ರಾಜ್ಯದ ವಿವಿದ ಮುಖಂಡರು ಮನವಿಮಾಡಿದ್ದಾರೆ.

ರಾಜ್ಯ ಮಟ್ಟದ ಮಹಿಳಾ ಪತ್ರಕರ್ತೆಯ ವರ್ಚಸ್ಸಿಗೆ ದಕ್ಕೆಯಾಗಬಾರದು ಎಂಬ ಕಾರಣಕ್ಕೆ ಮೂಲ ತಿಳಿಯ ಪಡಿಸುವುದು ಸರಿಯಾದ ಕ್ರಮವಲ್ಲ ಎಂಬ ಹಿನ್ನಲೆಯಲ್ಲಿ ಹೆಸರು ಬಹಿರಂಗವಪಡಿಸುತ್ತಿಲ್ಲ.

ಪತ್ರಿಕೆಗೆ ಲಭ್ಯ ಮಾಹಿತಿಯಂತೆ ಮದುವೆಯಾಗುವ ಬಗ್ಗೆ ಮಾತುಕತೆ ನಡೆಸಿ ಮಹಿಳಾ ಪತ್ರಕರ್ತೆಯ ಪೋಷಕರ ರೊಂದಿಗೆ ಮಾತುಕತೆ ನಡೆಸಿ, ಮದುವೆಗೆ ಒಪ್ಪಿಸಿ ನಂತರ ಕೈಕೊಟ್ಟಿದ್ದಾನೆ.
ಮದುವೆಯ ಎಲ್ಲಾ ಶಾಸ್ತ್ರ ಗಳನ್ನು ನಡೆಸಿ ಕಡೆಗಳಿಗೆಯಲ್ಲಿ ಅಂದರೆ ಮದುವೆಗೆ ಎರಡು ದಿನವಿರುವಾಗ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾನೆ.

ಈ ಪ್ರಕರಣ ನಡೆದು ಮೂರು ತಿಂಗಳಾಗಿದ್ದು, ಮಹಿಳಾ ಪತ್ರಕರ್ತೆ ಮಾನಸಿಕವಾಗಿ ನೊಂದು ಹೋಗಿದ್ದಾರೆ. ನ್ಯಾಯಕ್ಕಾಗಿ ಮಾಜಿ ಮಂತ್ರಿ, ಕಾಂಗ್ರೆಸ್ ಮುಖಂಡ ಎ ಜಡ್ ಝಮೀರ್ ಅಹಮದ್ ಖಾನ್ ರವರನ್ನು ಬೇಟಿಮಾಡಿದರು ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ ಪತ್ರಕರ್ತರಲ್ಲಿ ಪ್ರಮುಕರು, ಪಿ ಎಚ್ ಡಿ ಪದವಿದಾರರು ಆಗಿರುವವರ ವೈಯಕ್ತಿಕ ಜೀವನಕ್ಕೆ ಅಗಿರುವ ಬಗ್ಗೆ
ಜಮೀರ್ ಅಹ್ಮದ್ ಖಾನ್ ಆಪ್ತರಿಂದ ಅನ್ಯಾಯವಾಗಿರುವುದು ನಿಜಕ್ಕೂ ಖಂಡನಿಯ. ಈ ಬಗ್ಗೆ ಜಮೀರ್ ಅಹ್ಮದ್ ಪ್ರಾಮಾಣಿಕವಾಗಿ ವರ್ತಿಸಬೇಕು. ರಾಜಕಾರಣವನ್ನು ಬದಿಗಿಟ್ಟು ಮಹಿಳೆಗೆ ನ್ಯಾಯವನ್ನು ನೀಡಬೇಕು.
ಭಾಸ್ಕರ್ ಪ್ರಸಾದ್
(ದಲಿತ ಮುಖಂಡರು ಹಾಗೂ ರಾಜ್ಯ ಎಸ್ ಡಿಪಿಐ ಪ್ರಮುಖರು)

ಜಮೀರ್ ಅಹಮದ್ ಖಾನ್ ಮುಸ್ಲಿಂ ಸಮಾಜದ ಪ್ರಮುಖರು ಹಾಗು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ ರಾಜ್ಯಕ್ಕೆ ನ್ಯಾಯ ನೀಡುವ ಬಗ್ಗೆ ದಿನನಿತ್ಯ ದೊಡ್ಡ ದೋಡ್ಡ ಹೇಳಿಕೆಗಳನ್ನು ಕೊಡುತ್ತಾರೆ ಇವರ ಆಪ್ತರಿಂದ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಿ ಮಹಿಳಾ ಪತ್ರಕರ್ತೆಗೆ ಆಗಿರುವ ಅನ್ಯಾಯ ಸರಿಪಡಿಸದಿರುವುದು ನಿಜಕ್ಕೂ ಖಂಡನೀಯ.
ದಸ್ತಗಿರ್ ಮುಲ್ಲಾ
(ಬಿಎಸ್ಸಿ ರಾಜ್ಯ ಕಾರ್ಯದರ್ಶಿ)

ಜಮೀರ್ ಅಹ್ಮದ್ ಖಾನ್ ರವರ ಹೇಳಿಕೆಗಳು ನಾನು ಮಾಧ್ಯಮದ ಮುಖಾಂತರ ನೋಡಿದ್ದೇನೆ. ಎಲ್ಲರಿಗೂ ನ್ಯಾಯ ನೀಡುವ ಬಗ್ಗೆ ಮಾತನಾಡುತ್ತಾರೆ ಆದರೆ ಸ್ವಧರ್ಮ ದ ಮಹಿಳಾ ಪತ್ರಕರ್ತರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಾದ್ಯ ವಾಗದಿರುದಿರುವುದು ನಿಜಕ್ಕೂ ಮಾನವೀಯ. ಜಮೀರ್ ಅಹ್ಮದ್ ಖಾನ್ ರವರಿಗೆ ತಮ್ಮ ಸಮಾಜದ ಒಳಗಿನ ಮಹಿಳೆಗೆ ನ್ಯಾಯ ಕೊಡಿಸಿ ಆಗದಿದ್ದರೆ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅರ್ಥ ಇನ್ನು ಮುಂದೆ ಯಾವುದೇ ಹೇಳಿಕೆಗಳನ್ನು ನೀಡಬಾರದು.
ಅನ್ನಪೂರ್ಣ ಶ್ರೀಧರ್
(ಮಹಿಳ ಮುಖಂಡರು ಹಾಸನ)

ನಿಕಾ ದಿನವೇ ಕೈ ಕೊಟ್ಟ ಮಿಸ್ಬಾ ಮುಖರ್ರಮ್:
ಜುಲೈ ೦೧ ಕ್ಕೆ ಮದುವೆ ಇತ್ತು. ಜೂನ್ ೩೦ ರ ವರೆಗೂ ಎಲ್ಲವೂ ಸರಿ ಇತ್ತು. ಆದರೆ ಮದುವೆ ದಿನ ಬರುತ್ತೇನೆ ಎಂದು ಹೇಳಿದ್ದ ಮಿಸ್ಬಾ ಅದೇ ದಿನ ಕೈ ಕೊಟ್ಟಿದ್ದಾನೆ. ತಲಾಕ್ ಆದ ಯುವತಿ ನೀನು, ನಾನು ನಿನಗೆ ಮದುವೆಯಾಗಿ ಜನ್ನತ್ ಗೆ ಹೋಗುವೆ ಎಂದು ಭಾವನಾತ್ಮಕ ಮಾತುಗಳನ್ನಾಡಿ ಯುವತಿಗೆ ಮೋಸ ಮಾಡಿದ್ದಾನೆ. ಇಂಜಾಜ್ ಕಂಪನಿಯ ಮಾಲೀಕನಾದ ಮಿಸ್ಬಾ ಯುವತಿಗೆ ಮೋಸ ಮಾಡಿ ಈಗ ತಲೆ ಮರಿಸಿಕೊಂಡಿದ್ದಾನೆ. ಪತ್ರಕರ್ತರು, ವಿವಿಧ ಸಂಘಟನೆಗಳು ಸೇರಿದಂತೆ ಹಲವಾರು ಜನ ಮಹಿಳಾ ಪತ್ರಕರ್ತೆಯ ಬೆಂಬಲಕ್ಕೆ ನಿಂತಿದ್ದಾರೆ.

ಶಾಸಕ ಝಮೀರ್ ಅಹ್ಮದ್ ಖಾನ್ ರವರಿಗೆ ಒಂದು ಕಿವಿಮಾತು:
ಅಲ್ಪ ಸಂಖ್ಯಾತ ಪತ್ರಕರ್ತರೇ ಕಡಿಮೆ ಇರುವ ಈ ಸಮಯದಲ್ಲಿ ಒಬ್ಬ ಅಲ್ಪ ಸಂಖ್ಯಾತ ಪತ್ರಕರ್ತೆಗೆ ಅನ್ಯಾಯ ಆಗಿರುವುದು ನಿಮಗೆ ತಿಳಿದಿರುವ ವಿಚಾರ. ಈ ಕೇಸ್ ನ ಪ್ರತಿ ವಿಚಾರವು ನಿಮಗೆ ತಿಳಿದಿದೆ.
ಹಾಗಾಗಿ ಮಿಸ್ಬಾ ನಿಮಗೆ ಎಷ್ಟೇ ಆಪ್ತನಾಗಿದ್ದರೂ ಯಾರ ಒತ್ತಡಕ್ಕೂ ಒಳಗಾಗದೆ ಮಹಿಳಾ ಪತ್ರಕರ್ತೆ ಗೆ ತಾವು ನ್ಯಾಯ ಒದಗಿಸಿಕೊಡಬೇಕು. ಮತ್ತೆ ಮಿಸ್ಬಾ ದಂತ ಯುವಕರು ಅಮಾಯಕ ಹೆಣ್ಣು ಮಕ್ಕಳಿಗೆ ಮೋಸ ಮಾಡಬಾರದು. ಯಾಕೆಂದರೆ ಇದು ಇಡೀ ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತಹ ವಿಚಾರ. ಸಮುದಾಯದ ನಾಯಕರಾದ ನೀವು
ಮಹಿಳಾ ಪತ್ರಕರ್ತೆಗೆ ನ್ಯಾಯ ಒದಗಿಸಬೇಕಾಗಿ ನಿಮ್ಮಲ್ಲಿ ವಿನಂತಿ ಎಂದು ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!