July 6, 2026

ಕುಳಗೇರಿ ಕ್ರಾಸ್: ಲಾರಿಗಳ ನಡುವೆ ಢಿಕ್ಕಿ, ಓರ್ವ ಮೃತ್ಯು

0
image_editor_output_image-1680632350-1646977687671.jpg

ಕುಳಗೇರಿ ಕ್ರಾಸ್: ಎರಡು ಲಾರಿಗಳ ನಡುವೆ ಢಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಗ್ರಾಮದ ಬಳಿ ನಡೆದಿದೆ.

ಬಾಗಲಕೋಟೆ ಕಡೆಯಿಂದ ಬರುತ್ತಿದ್ದ ನೇಪಾಳ ಲಾರಿಗೂ ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆ ಕಡೆಯಿಂದ ಹೆದ್ದಾರಿಗೆ ಬಂದು ಸೇರುವ ಮಿನಿ ಲಾರಿಗೂ ಮುಖಾಮುಖಿ ಢಿಕ್ಕಿಯಾಗಿದೆ. ಮಿನಿ ಲಾರಿಯಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಕೆರೂರ ಹಾಗೂ ಕುಳಗೇರಿ ಕ್ರಾಸ್ ಪೊಲೀಸ್ ಠಾಣಾ ಸಿಬ್ಬಂದಿ ಸೇರಿದಂತೆ ಬಾದಾಮಿ ಸಿಪಿಐ ರಮೇಶ್ ಹಾನಾಪೂರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!