March 22, 2026

ಉಳ್ಳಾಲ: ಖಾಸಗಿ ಬಸ್ ನಲ್ಲಿ ಚೆಕ್ಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ

0
image_editor_output_image-428236358-1646717616110.jpg

ಉಳ್ಳಾಲ: ಮಗಳ ಐದನೇ ವರ್ಷದ ಜನ್ಮ ದಿನವನ್ನುಅದ್ದೂರಿಯಾಗಿ ಆಚರಿಸಬೇಕೆಂದು ಕನಸು ಕಂಡಿದ್ದ ತಂದೆ, ಹುಟ್ಟುಹಬ್ಬಕ್ಕೆ ವಾರವಿರುವಾಗಲೇ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಉಳ್ಳಾಲದಲ್ಲಿ ಸೋಮವಾರ ನಡೆದಿದೆ.

ಕೊಲ್ಯ ಕಣೀರು ತೋಟದ ಕಣೀರುಬೀಡುವಿನ ಪ್ರವೀಣ್ ಪೂಜಾರಿ (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪ್ರವೀಣ್ ಖಾಸಗಿ ಬಸ್ ನಲ್ಲಿ ಚೆಕ್ಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಮನೆಗೆ ಬಂದವರು ಕೋಣೆಯೊಳಗೆ ತೆರಳಿದ್ದರು. ಈ ವೇಳೆ ಅವರ ತಾಯಿ ಮನೆ ಹೊಗಡೆ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿದ್ದರು.

ಸಂಜೆ 7.30ಕ್ಕೆ ಪತ್ನಿ ಕೆಲಸದಿಂದ ಮರಳಿದಾಗ ಪಕ್ಕಾಸಿಗೆ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು.

ಮುಂದಿನ ವಾರ ಮಗಳ ಐದನೇ ವರ್ಷದ ಹುಟ್ಟುಹಬ್ಬವಿದ್ದು, ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಮನೆಯಲ್ಲಿ ಹೇಳುತ್ತಿದ್ದರು. ಆದರೆ ದುರ್ದೈವವಶಾತ್ ಅದಕ್ಕೂ ಮೊದಲು ಅವರು ಇಹಲೋಕ ತ್ಯಜಿಸಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!