March 22, 2026

ರಷ್ಯಾದಲ್ಲಿ ಹೊಸ ಕಂಟೆಂಟ್, ಲೈವ್‌ ಸ್ಟ್ರೀಮಿಂಗ್ ಸ್ಥಗಿತಗೊಳಿಸಿದ ಟಿಕ್‌ಟಾಕ್

0
image_editor_output_image-419123742-1646630923978.jpg

ನವದೆಹಲಿ: ದೇಶದ ಹೊಸ ‘ನಕಲಿ ಸುದ್ದಿ’ ತಡೆ ಕಾನೂನಿನ ಕಾರಣದಿಂದಾಗಿ ಕಿರು ವಿಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ರಷ್ಯಾದಲ್ಲಿ ತನ್ನ ವೇದಿಕೆಯಲ್ಲಿ ಹೊಸ ಕಂಟೆಂಟ್ ಮತ್ತು ಲೈವ್‌ ಸ್ಟ್ರೀಮಿಂಗ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗಷ್ಟೇ ಕಾನೂನಿಗೆ ಸಹಿ ಹಾಕಿದ್ದರು. ‘ಸೇನೆಯ ಬಗ್ಗೆ ‘ನಕಲಿ ಸುದ್ದಿ’ ಪ್ರಕಟಿಸಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಪರಿಚಯಿಸುವ ಮಸೂದೆಯನ್ನು ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಮುಂದೂಡಿತ್ತು.

‘ರಷ್ಯಾದ ಹೊಸ ನಕಲಿ ಸುದ್ದಿ’ ಕಾನೂನಿನ ಅಡಿಯಲ್ಲಿ, ನಾವು ಈ ಕಾನೂನಿನ ಸುರಕ್ಷತೆಯ ಪರಿಣಾಮಗಳನ್ನು ಪರಿಶೀಲಿಸುವಾಗ ನಮ್ಮ ವಿಡಿಯೊ ಸೇವೆಯ ಲೈವ್‌ ಸ್ಟ್ರೀಮಿಂಗ್ ಮತ್ತು ಹೊಸ ಕಂಟೆಂಟ್ ಅನ್ನು ಅಮಾನತುಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ಇದರಿಂದ ನಮ್ಮ ಅಪ್ಲಿಕೇಶನ್‌ನಲ್ಲಿನ ಮೆಸೇಜಿಂಗ್ ಸೇವೆ ಮೇಲೆ ಪರಿಣಾಮ ಉಂಟಾಗುವುದಿಲ್ಲ’ ಎಂದು ಕಂಪನಿ ಟ್ವೀಟ್‌ ಮಾಡಿದೆ.

Leave a Reply

Your email address will not be published. Required fields are marked *

error: Content is protected !!