February 1, 2026

ಅತ್ಯಾಚಾರ ಆರೋಪ: ಮಲಯಾಳಂ ಸಿನಿಮಾ ನಿರ್ದೇಶಕ ಲಿಜು ಕೃಷ್ಣನ ಬಂಧನ

0
Screenshot_2022-03-07-10-39-46-96_680d03679600f7af0b4c700c6b270fe7.jpg

ತಿರುವನಂತಪುರಂ: ಚಿತ್ರೀಕರಣದ ಹಂತದಲ್ಲಿರುವ ಮಲಯಾಳಂ ಸಿನಿಮಾ ‘ಪಡವೆಟ್ಟು’ ನಿರ್ದೇಶಕ ಲಿಜು ಕೃಷ್ಣ ಅವರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಭಾನುವಾರ ಅವರನ್ನು ಬಂಧಿಸಿದ್ದಾರೆ.

ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಲಿಜು ಕೃಷ್ಣ ಅವರನ್ನು ಬಂಧಿಸಲಾಗಿದೆ. ದೂರುದಾರರ ಯಾವುದೇ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಆದರೆ ಅವರು ಚಿತ್ರರಂಗದಿಂದ ಬಂದವರಲ್ಲ. ಬದಲಾಗಿ ಲಿಜು ಅವರಿಗೆ ಚೆನ್ನಾಗಿ ತಿಳಿದಿರುವವರು ಎಂದು ಪೊಲೀಸ್ ಅಧಿಕಾರಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಚೊಚ್ಚಲ ಸಿನಿಮಾವನ್ನು ನಿರ್ದೇಶಿಸುತ್ತಿರುವ ಲಿಜು ಅವರನ್ನು ಇಂದು (ಸೋಮವಾರ) ಕೊಚ್ಚಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಲಯಾಳಂ ತಾರೆಯರಾದ ಮಂಜು ವಾರಿಯರ್ ಮತ್ತು ನಿವಿನ್ ಪೌಲಿ ಅಭಿನಯದ ಲಿಜು ಅವರ ಚಿತ್ರ ‘ಪಡವೆಟ್ಟು’ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ದಿ ನ್ಯೂಸ್ ಮಿನಿಟ್ ಪ್ರಕಾರ, ಕೃಷ್ಣ ಅವರು ಕಣ್ಣೂರಿನಲ್ಲಿ ಪಡವೆಟ್ಟು ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ವೇಳೆ ಅವರನ್ನು ಬಂಧಿಸಲಾಗಿದೆ.

ಪ್ರತ್ಯೇಕ ಪ್ರಕರಣವೊಂದರಲ್ಲಿ, ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೊಚ್ಚಿ ಮೂಲದ ಪ್ರಸಿದ್ಧ ಟ್ಯಾಟೂ ಆರ್ಟಿಸ್ಟ್ ಸುಜೇಶ್ ಪಿಎಸ್ ಎಂಬುವವರನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!