ಬಂದೂಕು ಹಿಡಿದು ಉಕ್ರೇನ್ ಸೇನೆಯ ಜೊತೆ ಕೈಜೋಡಿಸಿದ ರೂಪದರ್ಶಿ
ಕೀವ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಮಿಸ್ ಉಕ್ರೇನ್, ರೂಪದರ್ಶಿ ಅನಸ್ತೇಸಿಯಾ ಲೆನ್ನಾ ದೇಶದ ರಕ್ಷಣೆಗಾಗಿ ಬಂದೂಕು ಹಿಡಿದಿದ್ದಾರೆ.
2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತೇಸಿಯಾ ಲೆನ್ನಾ ಉಕ್ರೇನ್ ಸೇನೆಯ ಜೊತೆ ಕೈಜೋಡಿಸಿದ್ದಾರೆ.
ತಮ್ಮ ದೇಶದ ಮೇಲೆ ದಾಳಿ ಮಾಡುವವರು ಕೊಲ್ಲಲ್ಪಡುತ್ತಾರೆ! ಎಂದು ಎಚ್ಚರಿಸಿರುವ ರೂಪದರ್ಶಿ ಸೈನಿಕರಿಗೆ ಜನರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ತಮ್ಮ ನಾಯಕ ಅಧ್ಯಕ್ಷ ಝೆಲೆನ್ ಸ್ಕಿಯವರನ್ನು ‘ನಿಜವಾದ ಮತ್ತು ಬಲಿಷ್ಠ ನಾಯಕ’ ಎಂದು ಲೆನ್ನಾ ಶ್ಲಾಘಿಸಿದ್ದಾರೆ.




