ಎಫ್ಎಂ ರೇಡಿಯೊ ವಾಹಿನಿಗಳು ಅಶ್ಲೀಲ ವಿಷಯಗಳ ಬಗ್ಗೆ ಪ್ರಸಾರ ಮಾಡಬಾರದು: ಕೇಂದ್ರ ಸರಕಾರದ ಎಚ್ಚರಿಕೆ
ನವದೆಹಲಿ: ಕೇಂದ್ರ ವಾರ್ತಾ ಸಚಿವಾಲಯವು ದೇಶದ ಎಫ್ಎಂ ರೇಡಿಯೊ ವಾಹಿನಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ. ಈ ವಾಹಿನಿಗಳು ಅಶ್ಲೀಲ, ಆಕ್ಷೇಪಾರ್ಹ ಭಾಷಾ ಬಳಕೆ, ವಿಷಯಗಳ ಪ್ರಸಾರ ಮಾಡಬಾರದು. ಒಂದು ವೇಳೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.
ಈ ರೀತಿಯ ವಿಷಯಗಳ ಪ್ರಸಾರವು, ವಾಹಿನಿಗೆ ಅನುಮತಿ ವೇಳೆ ನೀಡಿದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಎಚ್ಚರಿಸಲಾಗಿದೆ.
ಕೆಲವು ಎಫ್ಎಂ ವಾಹಿನಿಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ವಿಷಯಗಳು ಪ್ರಸಾರವಾಗುತ್ತಿವೆ. ಕೆಲವು ಜಾಕಿಗಳ ಭಾಷೆ ಅಶಿಸ್ತಿನಿಂದ, ದ್ವಂದ್ವಾರ್ಥದಿಂದ ಕೂಡಿರುತ್ತದೆ, ನಿಂದಿಸುವಂತಿರುತ್ತದೆ.
ಅವರು ಆಗಾಗ ಮಾನಹಾನಿಯಾಗುವಂತಹ, ಅವಮಾನಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಅವನ್ನೆಲ್ಲ ಸದಭಿರುಚಿಯೆನ್ನಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ.




