March 22, 2026

ಮದುವೆಯಾಗಲು ಪೀಡಿಸುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್‌ನ ಕೊಂದು ಚರಂಡಿಗೆ ಎಸೆದ ತಹಶೀಲ್ದಾರ್‌

0
IMG_20220223_175903.jpg

ಲಖನೌ: ಮಹಿಳಾ ಕಾನ್ಸ್‌ಟೇಬಲ್ ಒಬ್ಬರ ಶವ ಚರಂಡಿಯಲ್ಲಿ ಪತ್ತೆಯಾಗಿದ್ದು ಜನತೆಯನ್ನು ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶ ಲಖನೌದಲ್ಲಿ ಈ ಘಟನೆ ಸಂಭವಿಸುದ್ದು, ಘಟನೆ ಸಂಬಂಧ ತಹಶೀಲ್ದಾರ್ ಪದ್ಮಶ್ ಶ್ರೀವಾಸ್ತವ್ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಪದ್ಮಶ್ 5 ವರ್ಷಗಳ ಹಿಂದೆ ಮೃತ ಕಾನ್ಸ್ಟೇಬಲ್ ರುಚಿ ಸಿಂಗ್ ಅವರೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದರು.

ತಹಶೀಲ್ದಾರ್ ಪದೇಶ್ ವಿವಾಹದ ಬಳಿಕವೂ ರುಚಿ ಸಿಂಗ್ ಜೊತೆ ಸಂಬಂಧ ಹೊಂದಿದ್ದರು.

ಈ ನಡುವೆ ಪದೇಶ್ ತನ್ನ ಪತ್ನಿಗೆ ವಿಚ್ಛೇದನ ನೀಡಿ, ತನನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಳು.
ರುಚಿ ಸಿಂಗ್ ಕೊನೆಯ ಕರೆ ತಹಶೀಲ್ದಾರ್ ಪದೇಶ್‌ಗೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಚರಂಡಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೂರ್ವ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್ ಹತ್ಯೆ ಪ್ರಕರಣದಲ್ಲಿ ತಹಶೀಲ್ದಾರ್, ಅವರ ಪತ್ನಿ ಹಾಗೂ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!