November 22, 2024

ಸುಡಾನ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿ:
ಬಂಧಿತ ಪ್ರಧಾನಿ ಅಬ್ದಲ್ಲಾ ಹ್ಯಾಮ್‌ಡೊಕ್‌ ಬಿಡುಗಡೆ

0

ಕೈರೊ: ಸುಡಾನ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿಯ ನಂತರ ಬಂಧನಕ್ಕೊಳಗಾಗಿದ್ದ ಪ್ರಧಾನಿ ಅಬ್ದಲ್ಲಾ ಹ್ಯಾಮ್‌ಡೊಕ್‌ ಮತ್ತು ಅವರ ಪತ್ನಿಗೆ ಖಾರ್ಟೂಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಮರಳಲು ಅನುಮತಿ ನೀಡಲಾಗಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯವು ಸೇನಾ ದಂಗೆಯನ್ನು ಖಂಡಿಸಿದ ಮೇಲೆ, ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಅವರು ಬಂಧಿತರನ್ನು ಬಿಡುಗಡೆ ಮಾಡಲು ಸಮ್ಮತಿಸಿದರು. ಇದಾದ ನಂತರ, ಪ್ರಧಾನಿ ಮತ್ತು ಅವರ ಪತ್ನಿಗೂ ಮನೆಗೆ ಮರಳಲು ಅನುಮತಿ ನೀಡಲಾಗಿದೆ.

ಹ್ಯಾಮ್‌ಡೋಕ್ ಮತ್ತು ಅವರ ಪತ್ನಿ ಯಾವುದೇ ನಿರ್ಬಂಧಗಳಿಲ್ಲದೇ ಸಂಚರಿಸಲು ಅಥವಾ ಕರೆ ಮಾಡಲು ಅವಕಾಶ ನೀಡಲಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ, ಖಾರ್ಟೂಮ್‌ನಲ್ಲಿರುವ ಅವರ ಮನೆಯ ಸುತ್ತ ‘ಭಾರಿ ಭದ್ರತೆ ನಿಯೋಜಿಸಲಾಗಿದೆ‘ ಎಂದು ಅಧಿಕಾರಿ ತಿಳಿಸಿದರು.

ಈ ಮಧ್ಯೆ, ಕ್ರಿಪ್ರಕ್ರಾಂತಿ ವಿರೋಧಿಸಿ ಖಾರ್ಟೂಮ್‌ನ ಬೀದಿಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಸೇನಾಪಡೆಗಳು ಗುಂಡು ಹಾರಿಸಿದಾಗ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!