March 21, 2026

ತೀವ್ರ ಸ್ವರೂಪದ ಪ್ರತಿಭಟನೆ: ಕೆನಾಡದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿ ಜಾರಿ

0
image_editor_output_image-1918974706-1644907900496.jpg

ಒಟ್ಟಾವ: ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ್ರಧಾನಿ ಜಸ್ಟಿನ್‌ ಟ್ರುಡೊ ಸೋಮವಾರ ಅತಿ ವಿರಳ ಎನಿಸುವ ಕಾನೂನು ಕ್ರಮ ಕೈಗೊಂಡಿದ್ದಾರೆ.

ದೇಶದಲ್ಲಿ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.

ಎರಡು ವಾರಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ರಾಜಧಾನಿ ಒಟ್ಟಾವ ಸ್ತಬ್ಧಗೊಂಡಿದೆ. ಅಲ್ಲದೇ ಪ್ರತಿಭಟನೆ ಕಾವು ರಾಷ್ಟ್ರವನ್ನು ಆವರಿಸಿದೆ.

ಒಟ್ಟಾವದಲ್ಲಿನ ಟ್ರಕ್‌ಗಳ ದಿಗ್ಬಂಧನ, ಪ್ರತಿಭಟನೆಗಳಿಂದಾಗಿ ಗಡಿ ಪ್ರದೇಶಗಳಾದ ಆಲ್ಬರ್ಟಾ ಮತ್ತು ಮ್ಯಾನಿಟೋಬಾ ಸಂಪೂರ್ಣ ಸ್ತಬ್ಧಗೊಂಡಿದೆ. ಪ್ರತಿಭಟನಾಕಾರರನ್ನು ಚದುರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಪ್ರತಿಭಟನೆಯಲ್ಲಿ ತೊಡಗಿರುವವರ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲೂ ಸರ್ಕಾರಕ್ಕೆ ಅವಕಾಶವಿರಲಿದೆ ಎಂದು ಪ್ರಧಾನಿ ಮತ್ತು ಸರ್ಕಾರದ ಸಚಿವರು ತಿಳಿಸಿದ್ದಾರೆ ಎಂದು ‘ದಿ ನ್ಯೂಯಾರ್ಕಟ್‌ ಟೈಮ್ಸ್‌’ ವರದಿ ಮಾಡಿದೆ.

‘ಕಾನೂನುಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅದಕ್ಕೆ ಅನುಮತಿಯೂ ಇಲ್ಲ’ ಎಂದು ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!