ಹಲವು ವಾಹನಗಳಿಗೆ ಟ್ರಕ್ ಢಿಕ್ಕಿ: ನಾಲ್ವರು ಮೃತ್ಯು, 7 ಮಂದಿಗೆ ಗಾಯ
ರಾಯ್ ಗಢ: ವೇಗವಾಗಿ ತೆರಳುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈ-ಪುಣೆ ಹೆದ್ದಾರಿ ರಾಯ್ ಗಢದ ಖೊಪೊಲಿ ಎಂಬಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಈ ದುರ್ಘಟನೆ ನಡೆದಿದ್ದು 7 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಕ್ಸ್ ಪ್ರೆಸ್ ವೇ ಪೊಲೀಸರು ತಿಳಿಸಿದ್ದಾರೆ.




