March 21, 2026

ಕೋಳಿ ಅಂಕದಲ್ಲಿ ‘ಬಾಲ್‌’ ತಾಗಿ ಓರ್ವ ಸಾವು: 13 ಜನ ವಶಕ್ಕೆ

0
IMG_20220213_211832.jpg

ಚಿತ್ತೂರು: ಕೋಳಿ ಅಂಕದಲ್ಲಿ ಕೋಳಿ ಕಾಲಿಗೆ ಕಟ್ಟಿರುವ ‘ಬಾಲ್‌’ (ಚಾಕು) ತಾಗಿ ಓರ್ವ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಮಂಡ್ಯಂ ಮಂಡಲದ ಕಲಿಚೆರ್ಲ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ 13 ಜನರನ್ನು ಬಂಧಿಸಿದ್ದಾರೆ.
ಗಂಗೂಲಯ್ಯ (37) ಮೃತ ವ್ಯಕ್ತಿ.

ಘಟನೆ ಹಿನ್ನೆಲೆ
ಮಾಜಿ ಶಾಸಕ ಕಲಿಚೆರ್ಲಾ ಪ್ರಭಾಕರ್ ರೆಡ್ಡಿಯವರ 11ನೇ ಪುಣ್ಯಸ್ಮರಣೆ ನಿಮಿತ್ತ ಅವರ ಹತ್ತಿರ ಸಂಬಂಧಿಯೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಮಂಡ್ಯಂ ಮಂಡಲದ ಕಲಿಚೆರ್ಲ ಗ್ರಾಮದ ಹೊರವಲಯದಲ್ಲಿರುವ ಪರುಶ ತೋಪು ಆವರಣದಲ್ಲಿ ಕೋಳಿ ಅಂಕ ನಡೆದಿತ್ತು.

ಎರಡು ಕೋಳಿಗಳ ಕಾಲಿಗೆ (ಚಾಕು) ಕಟ್ಟಿ ಬಿಡಲಾಗಿತ್ತು. ಕೋಳಿ ಕಾಳದ ವೇಳೆ ಅಲ್ಲಿಯೇ ನಿಂತಿದ್ದ ಗಂಗೂಲಯ್ಯ ಪಾದಕ್ಕೆ ಒಂದು ಕೋಳಿಯ ಬಾಲ್‌ ತಾಗಿದೆ.

ನೇರ ರಕ್ತನಾಳಕ್ಕೇ ಬಾಲ್‌ ತಗುಲಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು 13 ಮಂದಿಯನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಇಂತಹ ಘಟನೆ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!