February 2, 2026

IPL ಮೆಗಾ ಹರಾಜು: ₹12.25 ಕೋಟಿಗೆ ಕೆಕೆಆರ್ ಪಾಲಾದ ಅಯ್ಯರ್

0
image_editor_output_image465302959-1644655535070.jpg

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆರಂಬಿಕ ಬ್ಯಾಟರ್ ಶಿಖರ್ ಧವನ್ ಅವರು ಇಂದಿನಿಂದ ಆರಂಭವಾಗಿರುವ ಐಪಿಎಲ್–2022 ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಆದ ಮೊದಲ ಆಟಗಾರ ಎನಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಬೀಸಿದ್ದ ಅವರನ್ನು ಪಂಜಾಬ್ ಕಿಂಗ್ಸ್ ತಂಡ ₹ 8.25 ಕೋಟಿ ನೀಡಿ ಖರೀದಿಸಿದೆ.

2020ರ ಆವೃತ್ತಿಯಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರಿಗಾಗಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪ್ರಾಂಚೈಸ್ ₹ 12.25 ಕೋಟಿ ಬಂಡವಾಳ ಹಾಕಿದೆ. ಡೆಲ್ಲಿ ಕ್ಯಾಂಪ್‌ನಲ್ಲಿದ್ದ ಮತ್ತೊಬ್ಬ ಆಟಗಾರ ಆರ್.ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್ ₹ 5 ಕೋಟಿಗೆ ಕೊಂಡುಕೊಂಡಿದೆ.

ಕಳೆದ ಹರಾಜಿನ ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್ ₹ 7.25 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ.

ಟ್ರೆಂಟ್ ಬೌಲ್ಟ್ (₹ 8 ಕೋಟಿ) ಮತ್ತು ಕಗಿಸೊ ರಬಾಡ (₹ 9.25 ಕೋಟಿ), ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ನ ಆರಂಭಿಕ ಆಟಗಾರನಾಗಿದ್ದ ಫಾಫ್ ಡು ಪ್ಲೆಸಿ ಅವರನ್ನು ₹ 7 ಕೋಟಿ ನೀಡಿ ಖರೀದಿಸಿದೆ

Leave a Reply

Your email address will not be published. Required fields are marked *

error: Content is protected !!