ಸುಳ್ಯ : ವಿದ್ಯುತ್ ಶಾಟ್೯ ಆಗಿ ಕಾರಿಗೆ ಬೆಂಕಿ: ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಸುಳ್ಯ: ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಶಾಲಾ ಬಳಿ ನಿಲ್ಲಿಸಿದ್ದ (ಕೆಎ21 ಝೆಡ್ 2615) ನಂಬರಿನ ಕಾರಿನ ಮುಂಬಾಗಕ್ಕೆ ಬೆಂಕಿ ಸ್ಪರ್ಶ ಗೊಂಡು ಕಾರಿನ ಮುಂಭಾಗ ಹಾನಿಗೊಂಡ ಘಟನೆ ಇಂದು ಸುಳ್ಯದಿಂದ ವರದಿಯಾಗಿದೆ.
ಜಾಲ್ಸೂರು ಕುಕ್ಕಂದೂರು ನಿವಾಸಿಯೋರ್ವರು ತಮ್ಮ ತೋಟಕ್ಕೆ ಹೋಗುವ ಸಂದರ್ಭ ರಸ್ತೆ ಬಳಿಯ ವಿದ್ಯುಚ್ಛಕ್ತಿ ಕಂಬದ ಪಕ್ಕದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ತಂತಿ ಶಾರ್ಟ್ ಆಗಿ ರಸ್ತೆ ಪಕ್ಕದ ಹುಲ್ಲಿಗೆ ಬಿದ್ದು ಬೆಂಕಿ ಆವರಿಸಿದೆ . ಈ ವೇಳೆ ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ತಗುಲಿ ಕಾರಿನ ಮುಂಭಾಗ ಉರಿಯಲು ಆರಂಭಿಸಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ಬೆಂಕಿ ಕಾರನ್ನು ಆವರಿಸುವ ಮೊದಲು ಸ್ಥಳೀಯರು ಬಂದು ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದಾಗಿ ದೊಡ್ಡ ದುರಂತ ತಪ್ಪಿದೆ.




