ವಿಟ್ಲ: ವಿದ್ಯಾರ್ಥಿಗಳ ನಡುವೆ ಘರ್ಷಣೆ: ಒಬ್ಬ ವಿದ್ಯಾರ್ಥಿಗೆ ಗಾಯ: ಓರ್ವ ವಿದ್ಯಾರ್ಥಿ ಡಿಬಾರ್
ವಿಟ್ಲ: ವಿದ್ಯಾರ್ಥಿಗಳ ತಂಡವೊಂದು ದಾಳಿ ನಡೆಸಿ ಓರ್ವ ಗಾಯಗೊಂಡ ಘಟನೆ ವಿಟ್ಲ ಖಾಸಗೀ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಖಾಸಗೀ ಶಾಲೆಯಲ್ಲಿ 5ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಕೆಲವು ವಿದ್ಯಾರ್ಥಿಗಳನ್ನು ಭಯಗೊಳಿಸುವ ಕಾರ್ಯ ನಡೆಸುತ್ತಿದ್ದರು. ಈ ಘಟನೆ ಶುಕ್ರವಾರ ತಾರಕಕ್ಕೆ ಹೋಗಿ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯವರು ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದಾರೆ.




