March 21, 2026

ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮದುಮಗಳು ಮೃತ್ಯು, ಅಂಗಾಂಗಳ ದಾನ

0
image_editor_output_image1004407677-1644641901424.jpg

ಕೋಲಾರ: ಮದುವೆ ಮಂಟಪದಲ್ಲಿ ಕುಸಿದು ಬಿದ್ದ ಮದುಮಗಳು ಸಾವನ್ನಪ್ಪಿದ ಘಟನೆ ಕೋಲಾರದ ಶ್ರೀನಿವಾಸಪುರದಲ್ಲಿ ನಡೆದಿದ್ದು, ಮಗಳ ಬ್ರೈನ್ ಡೆಡ್ ಆಗಿರೋದನ್ನು ತಿಳಿದ ಪೋಷಕರು ಮದುಮಗಳ ಅಂಗಾಂಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಚ್ರೈತ್ರಾ (26) ಕುಸಿದು ಬಿದ್ಧು ಅಸ್ವಸ್ಥಗೊಂಡಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ಪರೀಕ್ಷಿಸಿದಂತ ವೈದ್ಯರು ಚೈತ್ರ ಮೆದುಳು ನಿಷ್ಕ್ರೀಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪೋಷಕರನ್ನು ಸಮಾಧಾನಿಸಿದಂತ ವೈದ್ಯರೂ ಚೈತ್ರ ಸಾವನ್ನಪ್ಪಿದರೂ ಬೇರೆಯವರ ಬಾಳಿಗೆ ಬೆಳಕಾಗುವಂತೆ ಅಂಗಾಂಗ ದಾನ ಮಾಡೋದಕ್ಕೆ ಮನವೊಲಿಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!