March 21, 2026

ಮಂಗಳೂರು ಖಾಸಗಿ ಕಾಲೇಜು ಬಳಿ ತಲವಾರು ಹಿಡಿದ ಪ್ರಕರಣ: ಆರೋಪಿಯ ಬಂಧನ

0
IMG_20220203_103832.jpg

ಮಂಗಳೂರು: ನಗರದ ಬಲ್ಲಾಳ್‌ಬಾಗ್‌ನ ಖಾಸಗಿ ಕಾಲೇಜೊಂದರ ಬಳಿ ತಲವಾರು ಹಿಡಿದು ಆತಂಕ ಸೃಷ್ಟಿಸಿದ್ದ ಯುವಕರ ತಂಡದ ಪೈಕಿ ಆರೋಪಿಯೋರ್ವನನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿಯನ್ನು ಬಲ್ಲಾಳ್‌ ಬಾಗ್ ಸಮೀಪದ ವಿವೇಕನಗರ ನಿವಾಸಿ ವಿಶ್ವನಾಥ್ (22) ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಯುವಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಕ್ಸಮರ ನಡೆದಿದೆ. ಇದಾದ ಕೆಲವೇ ಹೊತ್ತಿನಲ್ಲಿ ಯುವಕರಿಬ್ಬರು ಸ್ಕೂಟರ್‌ನಲ್ಲಿ ತಲವಾರು ಹಿಡಿದುಕೊಂಡು ಕಾಲೇಜು ಆವರಣದ ಬಳಿ ಬಂದಿದ್ದು, ವಿದ್ಯಾರ್ಥಿಗಳು ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದರು. ಬಳಿಕ ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ, ವಿಡಿಯೋದ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!