ಉಡುಪಿ: ಇಲ್ಲಿನ ಯುವ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಅಂಬಲ ಪಾಡಿಯ ಮಜ್ಜಿಗೆಪಾದೆ ಎಂಬಲ್ಲಿ ನಡೆದಿದೆ.
ಮೃತರನ್ನು ಉಡುಪಿಯ ಗುರುಕೃಪಾ ಟ್ರೇಡರ್ಸ್‌ನ ಮಾಲಕ ಹಾಗೂ ಸುರೇಶ್ ಪೈಯವರ ಪುತ್ರ ಕಾರ್ತಿಕ್ ಪೈ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.