ಮೀಡಿಯಾ ಒನ್ ನ್ಯೂಸ್ ಚಾನಲ್ ಪ್ರಸಾರಕ್ಕೆ ಕೇಂದ್ರ ಸರಕಾರದಿಂದ ತಡೆ..!
ತಿರುವನಂತಪುರಂ: ಕೇರಳದ ಮೀಡಿಯಾ ಒನ್ ಸುದ್ದಿ ವಾಹಿನಿಯ ಪ್ರಸಾರವನ್ನು ನಿಲ್ಲಿಸುವಂತೆ ಕೇಂದ್ರ ವಾರ್ತಾ ಇಲಾಖೆ ಆದೇಶ ಹೊರಡಿಸಿದೆ.
ಈ ಹಿಂದೆ ಚಾನೆಲ್ ಪ್ರಸಾರಕ್ಕೆ ತಡೆ ನೀಡಲಾಗಿದ್ದರೂ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು.
ಇದೀಗ ಮತ್ತೊಮ್ಮೆ ಕೇಂದ್ರ ಸರಕಾರ ಪ್ರಸಾರಕ್ಕೆ ತಡೆ ನೀಡಿದೆ ಎಂದು ತಿಳಿದು ಬಂದಿದೆ. ಸುರಕ್ಷತೆಯ ಕಾರಣಗಳನ್ನು ಉಲ್ಲೇಖಿಸಿ ಕೇಂದ್ರ ವಾರ್ತಾ ಇಲಾಖೆಯು ಪ್ರಸಾರಕ್ಕೆ ತಡೆ ನೀಡಿದ್ದು, ಯಾವುದೇ ಸಮರ್ಪಕ ಕಾರಣಗಳನ್ನು ನಮ್ಮ ಮುಂದಿಟ್ಟಿಲ್ಲ ಎಂದು ಮೀಡಿಯಾ ಒನ್ ವಾಹಿನಿಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ನಾವು ಕಾನೂನು ಹೋರಾಟವನ್ನು ಮುಂದುವರಿಸಲಿದ್ದು, ನ್ಯಾಯ ಸಿಗಲಿದೆ ಮತ್ತು ಮೀಡಿಯಾ ಒನ್ ಮತ್ತೆ ಪ್ರಸಾರ ಪ್ರಾರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ಮೀಡಿಯಾ ಒನ್ ಸಂಪಾದಕ ಪ್ರಮೋದ್ ರಾಮನ್ ತಿಳಿಸಿದ್ದಾರೆ.
“ಸತ್ಯ ಹೇಳುವ ಮತ್ತು ಯಾವುದೇ ರಾಜಕೀಯ ಪಕ್ಷದ ಅಡಿಯಾಳಾಗಿರದ ಮೀಡಿಯಾ ಒನ್ ಚಾನೆಲ್ ಕುರಿತು ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿರುವುದು ಅಚ್ಚರಿಯೇನಲ್ಲ” ಎಂದು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2020 ರ ಮಾರ್ಚ್ 6ರಂದು ಮೀಡಿಯಾ ಒನ್ ಮತ್ತು ಏಶ್ಯನೆಟ್ ನ್ಯೂಸ್ ಗಳ ಪ್ರಸಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ತೀವ್ರ ಪ್ರತಿಭಟನೆ ಬಳಿಕ ಅದಕ್ಕೆ ಮತ್ತೆ ಅವಕಾಶ ನೀಡಲಾಗಿ





