February 4, 2026

ದಾರುನ್ನಜಾತ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

0
IMG_20220126_125625.jpg

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ವಿದ್ಯಾಸಂಸ್ಥೆಯಲ್ಲಿ 73 ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಜರಗಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಭಾರತೀಯರಾದ ಸರ್ವರು ಭಾರತದ ಪರಂಪರೆಯನ್ನು ಉಳಿಸಿಕೊಂಡು ಸಂವಿಧಾನವನ್ನು ಗೌರವಿಸಿ ಸಹೋದರತೆಯಿಂದ ಜೀವಿಸೋಣ ಎಂದು ನುಡಿದರು. ಸಂಸ್ಥೆಯ ಮುದರ್ರಿಸ್ ಅಬ್ದುಲ್ ಹಮೀದ್ ಲತೀಫಿ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಹಾಫಿಳ್ ಶರೀಫ್ ಮುಸ್ಲಿಯಾರ್,ಉಸ್ಮಾನ್ ಹಾಜಿ, ಹಕೀಂ ಮುಸ್ಲಿಯಾರ್, ಅಬ್ದುರಝಾಖ್ ಸಅದಿ ಸ್ವಾಗತಿಸಿ ವಂದಿಸಿದರು. ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!