February 4, 2026

ಕಾಸರಗೋಡು: ತಲೆಕೆಳಗಾಗಿಸಿ ಧ್ವಜರೋಹಣ ನೆರೆವೇರಿಸಿ ಅಗೌರವ

0
Screenshot_2022-01-26-13-55-14-72_680d03679600f7af0b4c700c6b270fe7.jpg

ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯ ಕ್ರಮದಲ್ಲಿ ತಲೆಕೆಳಗಾಗಿಸಿ ಧ್ವಜರೋಹಣ ನೆರೆವೇರಿಸಿ ಅಗೌರವ ಹಾಗೂ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.

ತಪ್ಪು ಅರಿವಾದ ಬಳಿಕ ಸರಿಪಡಿಸಿ ಬಳಿಕ ಆರೋಹಣ ಮಾಡಲಾಯಿತು. ರಾಜ್ಯ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜಾರೋಹಣ ನೇರವೇರಿಸಿದ್ದರು. ಧ್ವಜ ವಂದನೆ ಸ್ವೀಕರಿಸಿದ ಬಳಿಕವಷ್ಟೇ ಮಾಧ್ಯಮದವರು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ತಪ್ಪು ಅರಿವಾಗಿ ಧ್ವಜವನ್ನು ಕೆಳಗಿಸಿ ಸರಿಪಡಿಸಿದ ಬಳಿಕ ಆರೋಹಣ ಮಾಡಲಾಯಿತು.

ಇನ್ನು ಧ್ವಜ ತೆಲೆಕೆಳಗಾಗಿಸಿ ಹಾರಿದರೂ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸರು ಮತ್ತುಅಧಿಕಾರಿಗಳು ಉಪಸ್ಥಿತರಿದ್ದರೂ ವಂದನೆ ಸ್ವೀಕರಿಸುವ ತನಕ ಗಮನಕ್ಕೆ ಬಂದಿರದಿರುವುದು ಬಾರಿ ದೊಡ್ಡ ಲೋಪ ಕಂಡುಬಂದಿದೆ.

ಘಟನೆ ಬಳಿಕ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೆನಾ ಹಾಗೂ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ.ಕೆ ರಮೇ೦ದ್ರನ್ ಅವರನ್ನು ಕರೆಸಿ ಅತೃಪ್ತಿ ಸೂಚಿಸಿದ್ದು, ತನಿಖೆಗೆ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಆದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!