March 19, 2026

ಬಂಡಿಪೋರಾ ಸುಂಬಲ್‌ನ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಸ್ಫೋಟ:
6 ಜನರಿಗೆ ಗಾಯ

0
car_1200x768.jpeg

ಜಮ್ಮು & ಕಾಶ್ಮೀರ: ಬಂಡಿಪೋರಾ ಜಿಲ್ಲೆಯ ಸುಂಬಲ್‌ನ ಸುಮೋ ಟ್ಯಾಕ್ಸಿ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮಹಿಳೆಯರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಇಬ್ಬರನ್ನು ಎಸ್‌ಎಂಹೆಚ್‌ಎಸ್ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ನಾಲ್ವರನ್ನು ಸುಂಬಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ನಂತರ ಬಂಡಿಪೋರಾ ಪ್ರದೇಶದಲ್ಲಿ ಬಂದೋಬಸ್ತ್ ಏರ್ಪಡಿಸಿಲಾಗಿದೆ. ಗಾಯಗೊಂಡವರನ್ನು ಮೊಹಮ್ಮದ್ ಅಲ್ತಾಫ್, ಫೈಸಲ್ ಫಯಾಜ್, ಮುಷ್ತಾಕ್ ಅಹ್, ತಸ್ಲೀಮಾ ಬಾನೋ, ಅಬ್ ಹಮೀದ್ ಮತ್ತು ಫಯಾಜ್ ಅಹ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!