February 2, 2026

ಸುಳ್ಯ: ಗಾಯಗೊಂಡಿದ್ದ ಯುವಕನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಪಲ್ಟಿ

0
IMG-20220124-WA0015.jpg

ಸುಳ್ಯ: ಅರಂತೋಡಿನಿಂದ ಅಡ್ಯಡ್ಕ ಪಾತೋಟ್ಟಿ ಮನೆಗೆ ತೆರಳುತ್ತಿದ್ದ ಡಿಯಪು ರವರ ಮಗ ಬೈಕ್ ನಲ್ಲಿ ತೆರಳುವಾಗ ರಸ್ತೆಗೆ ಅಡ್ಡಬಂದ ಕಾಡುಕೋಣಕ್ಕೆ ಗುದ್ದಿ ಬೈಕ್ ಪಲ್ಟಿಯಾಯಿತು.

ಗಂಭೀರ ಗಾಯಗೊಂಡಿದ್ದ ಆ ಯುವಕನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರ ಸಲಹೆ ಮೇರೆಗೆ ಗಾಯಗೊಂಡಿದ್ದ ಆ ಯುವಕನನ್ನು ಮಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ಅಂಬ್ಯುಲೆನ್ಸ್ ಪುತ್ತೂರಿನ ಕಲ್ಲರ್ಪೆ ತಲುಪುತ್ತಿದ್ದಂತೆ ಎದುರಿನಿಂದ ವಾಹನಕ್ಕೆ ಅಂಬ್ಯುಲೆನ್ಸ್ ಸೈಡ್ ಕೊಡುತ್ತಿದ್ದಂತೆ ಪಕ್ಕದಲ್ಲಿದ್ದ ಗುಂಡಿಗೆ ಇಳಿದು ಅಂಬ್ಯುಲೆನ್ಸ್ ಪಲ್ಟಿಯಾಯಿತು.

ಪರಿಣಾಮ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ, ಚಾಲಕ ಹಾಗೂ ಜತೆಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಪುತ್ತೂರು ಪೋಲೀಸರು ಸ್ಥಳಕ್ಕೆ ಬಂದು ರೋಗಿಯನ್ನು 108 ವಾಹನದಲ್ಲಿ ಮಂಗಳೂರು ವೆನ್ ಲಾಕ್ ಆಸ್ಪತ್ರೆ ಗೆ ಕರೆದೊಯ್ದು ದಾಖಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!