ಸುಳ್ಯ: ಕಲ್ಲೋಣಿ ಬಳಿ ಕಾರು ಮಿನಿ ಲಾರಿ ಡಿಕ್ಕಿ: ಕಾರು ಜಖಂ
ಸುಳ್ಯ: ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಕಲ್ಲೋಣಿ ಸಮೀಪ ತಿರುವಿನಲ್ಲಿ ಕಾರು ಹಾಗು ಲಾರಿ ಡಿಕ್ಕಿ ಹೊಡೆದುಕೊಂಡು ಕಾರಿನ ಮುಂಭಾಗ ಹಾನಿಯಾದ ಘಟನೆ ಜ.24 ರಂದು ನಡೆದಿದೆ.
ಸುಳ್ಯ ಕಡೆಯಿಂದ ಬೆಳ್ಳಾರೆ ಕಡೆಗೆ ಹೋಗುವ ಸ್ವಿಫ್ಟ್ ಕಾರು ಹಾಗೂ ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಮಿನಿ ಲಾರಿ ಕಲ್ಲೋಣಿ ಸಮೀಪ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಾರಿನ ಎದುರು ಭಾಗ ಜಖಂ ಗೊಂಡಿದೆ.
ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗಿಲ್ಲವೆಂದು ತಿಳಿದು ಬಂದಿದೆ.
ಕಾರಿನ ಎದುರಿನ ಟಯರ್ ಒಡೆದಿದ್ದು ಕಾರನ್ನು ಅಲ್ಲಿರುವ ಜನರ ಸಹಾಯದಿಂದ ಎತ್ತಿ ರಸ್ತೆ ಬದಿಗೆ ಇಡಲಾಯಿತೆಂದು ತಿಳಿದು ಬಂದಿದೆ.




