ಪಕ್ಷಾಂತರ ಆಗದಂತೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್
ಹೊಸದಿಲ್ಲಿ: “ಶ್ರೀ… ಎಂಬ ಹೆಸರಿನವನಾದ ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡುತ್ತೇನೆ.
ಚುನಾವಣೆ ಫಲಿತಾಂಶ ಪ್ರಕಟಗೊಂಡು ಸಂಪುಟ ರಚನೆಯಾದಾಗ ಸಿಎಂ, ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿರುವುದನ್ನು ನೋಡಿರುತ್ತೀರಿ. ಆದರೆ ಗೋವಾದಲ್ಲಿ ಚುನಾವಣೆ ನಡೆಯುವ ಮುನ್ನವೇ ಈ ರೀತಿ “ಪ್ರಮಾಣ” ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ಅಂದ ಹಾಗೆ, ಹೀಗೆ ಪ್ರಮಾಣ ಮಾಡಿದ್ದು ಬೇರಾರೂ ಅಲ್ಲ, ಕಾಂಗ್ರೆಸ್‌ನ ನಾಯಕರು! ಗೋವಾದಲ್ಲಿ ಕಳೆದ 5 ವರ್ಷಗಳಿಂದಲೂ “ಪಕ್ಷಾಂತರ’ದ ಅತೀ ದೊಡ್ಡ ಬಲಿಪಶುವಾಗಿದ್ದು ಕಾಂಗ್ರೆಸ್. 2017ರ ವಿಧಾನಸಭೆ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚನೆ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ.
ಅನಂತರದಲ್ಲಿ 17 ಶಾಸಕರ ಪೈಕಿ 15 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ. ಮತ್ತೂಮ್ಮೆ ಈ ರೀತಿ ಆಗದಿರಲಿ ಎಂಬ ಕಾರಣಕ್ಕೆ ಈಗ ಕಾಂಗ್ರೆಸ್ ‘ಪ್ರಮಾಣ’ದ ಮೊರೆ ಹೋಗಿದೆ.




