February 1, 2026

ವರ್ಚುವಲ್ ವಿಚಾರಣೆಗೆ ವಕೀಲರು ಮೊಬೈಲ್ ಫೋನ್ ಬಳಸಬಹುದು: ಸಿಜೆಐ ಅನುಮತಿ

0
image_editor_output_image-1437215003-1642567411250.jpg

ನವದೆಹಲಿ: ವರ್ಚುವಲ್ ವಿಚಾರಣೆಗೆ ವಕೀಲರು ಮೊಬೈಲ್ ಫೋನ್ ಬಳಸಬಹುದು ಎಂದು ಸಿಜೆಐ ಎನ್ ವಿ ರಮಣ ಅನುಮತಿ ನೀಡಿದ್ದಾರೆ.

ವರ್ಚುವಲ್ ವಿಚಾರಣೆ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇಲ್ಲದ ವಕೀಲರು ಮೊಬೈಲ್ ಫೋನ್ ಬಳಸಬಹುದು. ಆದರೆ ಮೊಬೈಲ್ ಫೋನ್ ಬಳಸುವುದಿದ್ದಲ್ಲಿ, ಸೂಕ್ತವಾದ ಸ್ಥಳದಲ್ಲಿ ಇರಿಸಿ, ವಕೀಲರ ಮುಖ ಸ್ಪಷ್ಟವಾಗಿ ಕಾಣಿಸುವಂತಿರಬೇಕು ಮತ್ತು ಧ್ವನಿ ಸ್ಪಷ್ಟವಾಗಿರಬೇಕು ಎಂದು ಸಿಜೆಐ ಹೇಳಿದ್ದಾರೆ.

ವಿಚಾರಣೆಗೆ ಮೊಬೈಲ್ ಬಳಸಿದರೂ, ಕೋರ್ಟ್ ನಿಯಮಗಳನ್ನು ಪಾಲಿಸಬೇಕು ಮತ್ತು ಅಗತ್ಯವಿದ್ದಲ್ಲಿ ಮೊಬೈಲ್ ಮ್ಯೂಟ್ ಮಾಡುವುದು ಸೇರಿದಂತೆ ಶಿಷ್ಟಾಚಾರ ಪಾಲಿಸುವಂತೆ ವಕೀಲರಿಗೆ ಸೂಚಿಸಲಾಗಿದೆ.

ಆನ್‌ಲೈನ್ ಮೂಲಕ ನಡೆಯುವ ವಿಚಾರಣೆಯ ವೇಳೆ ಹಲವು ವಕೀಲರು ಸರಿಯಾಗಿ ಮೊಬೈಲ್ ಬಳಸುತ್ತಿಲ್ಲ ಮತ್ತು ವಿಚಾರಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಈ ಹಿಂದೆ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.

Leave a Reply

Your email address will not be published. Required fields are marked *

error: Content is protected !!