ಬಿಜೆಪಿ, ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್:
ಮರಾಠಿ ನಟ ಧಾರಾವಾಹಿಯಿಂದ ಹೊರಕ್ಕೆ
ಸತಾರಾ: ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಮರಾಠಿ ನಟ ಕಿರಣ್ ಮಾನೆ ಅವರನ್ನು ಧಾರಾವಾಹಿಯಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ನಿರ್ಧಾರಕ್ಕೆ ಕಿಡಿ ಕಾರಿರುವ ಸತಾರಾ ಜಿಲ್ಲೆಯ ಗುಲುಂಬ್ ಗ್ರಾಮದ ಸರಪಂಚ್, ಪ್ರೊಡಕ್ಷನ್ ಹೌಸ್‌ಗೆ ಗ್ರಾಮದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಬರೆದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮರಾಠಿ ನಟ ಕಿರಣ್ ಮಾನೆ ಅವರು ಪೋಸ್ಟ್‌ಗಳನ್ನು ಆಧರಿಸಿ ಮುಲ್ಗಿ ಝಲಿ ಹೋ (Mulgi Zali Ho) ಧಾರಾವಾಹಿಯಿಂದ ತೆಗೆದುಹಾಕಲಾಗಿದೆ ಎಂದು ನಟ ಹೇಳಿಕೊಂಡಿದ್ದಾರೆ. ಶೋಯಿಂದ ಹೊರಹಾಕಲು ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಆದರೆ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಘಟಕದ ಯಾರೋ ಆಫ್ ದಿ ರೆಕಾರ್ಡ್ ಹೇಳಿದ್ದಾರೆ ಎಂದು ನಟ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಶಾಹು ಮಹಾರಾಜ, ಮಹಾತ್ಮ ಫುಲೆ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ಮಹಾರಾಷ್ಟ್ರ ಪ್ರಜಾಪ್ರಭುತ್ವದ ಮೇಲೆ ಸಾಗುತ್ತಿದೆ ಎಂಬುದನ್ನು ಮರಾಠಿ ಚಿತ್ರರಂಗ ಮರೆಯಬಾರದು ಎಂದು ಸರಪಂಚ್ ಸ್ವಾತಿ ಮಾನೆ ಪತ್ರದಲ್ಲಿ ಬರೆದಿದ್ದಾರೆ.




