February 4, 2026

ಮಂಗಳೂರು: ಪಿಕ್ ಅಪ್ ವಾಹನ
ರಿವರ್ಸ್ ತೆಗೆಯುವ ವೇಳೆ ವೃದ್ಧನಿಗೆ ಡಿಕ್ಕಿ: ವ್ಯಕ್ತಿ ಮೃತ್ಯು

0
IMG-20220116-WA0000.jpg

ಮಂಗಳೂರು: ವಾಹನ ರಿವರ್ಸ್ ತೆಗೆಯುವ ಸಂದರ್ಭ ವಾಹನ ಡಿಕ್ಕಿ ಹೊಡೆದ ಕಾರಣ ವಯೋವೃದ್ದರೋರ್ವರು ಮೃತಪಟ್ಟ ಘಟನೆ ಮಂಗಳೂರು ನಗರದ ಶಕ್ತಿನಗರದಲ್ಲಿ ಸಂಭವಿಸಿದೆ.

ಇಲ್ಲಿನ ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿಯ ಮನೆ ಅಂಗಳದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು 85 ವರ್ಷದ ಕೊರಗಪ್ಪ ಎಂದು ಗುರುತ್ತಿಸಲಾಗಿದೆ.

ಕೊರಗಪ್ಪ ರವರು ಮನೆಯ ಅಂಗಳದಲ್ಲಿದ್ದ ಸಮಯ ಕೆ.ಎ-19-ಎಡಿ-2189 ನಂಬ್ರದ ಪಿಕ್ ಅಪ್ ವಾಹನದಲ್ಲಿ ಟೈಲ್ಸ್ ತುಂಬಿಕೊಂಡು ಬಂದ ವಾಹನವನ್ನು ಹಿಂದಕ್ಕೆ ತೆಗೆಯುವ ಸಂದರ್ಭ ಈ ಹಿಂದುಗಡೆ ನಿಂತಿದ್ದ ಕೊರಗಪ್ಪರಿಗೆ ಗುದ್ದಿದ್ದ ಪರಿಣಾಮ ತಲೆಗೆ ತಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಆವರು ಮೃತಪಟ್ಟಿದ್ದರು.

ಚಾಲಕನ ನಿರ್ಲಕ್ಯವೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಪಿಕ್ ಅಪ್ ವಾಹನದ ಚಾಲಕ ಮೋಹನ್ ರವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ 05/2022 ಕಲಂ 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!