March 23, 2026

ಸಿದ್ದಾಪುರ: ಕಾಡಾನೆ ದಾಳಿಗೆ ವಿದ್ಯಾರ್ಥಿ ಸಾವು

0
IMG_20220114_223834.jpg

ಸಿದ್ದಾಪುರ: ಕಾಡಾನೆ ದಾಳಿಗೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಸಿದ್ದಾಪುರದಲ್ಲಿ ಸಂಭವಿಸಿದೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ಕಬೀರ್ ಮತ್ತು ಸಮೀರಾ ದಂಪತಿಗಳ ಪುತ್ರ ವಿದ್ಯಾರ್ಥಿ ಆಶಿಕ್ (19) ಮೃತ ವಿದ್ಯಾರ್ಥಿ. ಮತ್ತೋರ್ವ ವಿದ್ಯಾರ್ಥಿ ಅಸ್ಮಿಲ್ (19) ಗಾಯಗೊಂಡಿದ್ದಾರೆ.

ಅರೆಕಾಡಿನಿಂದ ನೆಲ್ಯಹುದಿಕೇರಿಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ಹಠಾತನೆ ಕಾಡನೆಯೊಂದು ಕಾಫಿ ತೋಟದಿಂದ ರಸ್ತೆಗೆ ಬಂದು ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಆಶಿಕ್ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಶಿಕ್ ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭ ಸಾವನ್ನಪ್ಪಿದ್ದಾರೆ. ಅಸ್ಮಿಲ್ ಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.

Leave a Reply

Your email address will not be published. Required fields are marked *

error: Content is protected !!