February 4, 2026

ವಿಟ್ಲ: ಸಾಲೆತ್ತೂರು ಘಟನೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರದಿಂದ ಕೋಮು ದ್ವೇಷ ಸೃಷ್ಠಿ: ಎಸ್ಡಿಪಿಐ ಆರೋಪ

0
IMG-20220113-WA0028.jpg

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರವು ಕಳೆದ ಹಲವಾರು ತಿಂಗಳುಗಳಿಂದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆಗೆ ಸಂಚು ರೂಪಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಸಾಲೆತ್ತೂರಿನಲ್ಲಿ ನಡೆದ ಘಟನೆಯಿಂದ ಕೊರಗರ ಸಮುದಾಯ, ಮುಸ್ಲಿಂ ಮತ್ತು ಹಿಂದು ಸಮುದಾಯದ ಭಾವನೆಗಳನ್ನು ಎಳೆದು ತಂದು ಸಮಾಜದಲ್ಲಿ ದ್ವೇಷ ಸೃಷ್ಟಿಸಿ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರಂತರವಾಗಿ ದಲಿತ್ ಸಮುದಾಯವನ್ನು ಶೋಷಣೆಗೆ ಗುರಿಯಾಗಿಸುತ್ತಾ ಬಂದಿರುವ ಪರಿವಾರವೂ ಅವರು ಈ ಒಂದು ಘಟನೆಯ ವಿಚಾರವಾಗಿ ಕೊರಗ ಸಮುದಾಯದ ಪ್ರೀತಿ ಮೂಡಲು ಇಲ್ಲಿ ಗಲಭೆ ನಡೆಸಲು ಇರುವ ಷಡ್ಯಂತ್ರ ಎಂಬುದು ಸ್ಪಷ್ಟವಾಗಿದೆ. ಕೊರಗ ಮತ್ತು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿಕೊಂಡು ಜಿಲ್ಲೆಯಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಪಕ್ಷುಬ್ಧ ವಾತಾವರಣ ನಿರ್ಮಿಸುತ್ತಿದೆ ಎಂದರು.

ಮದುಮಗ ಹಾಕಿದ ಡ್ರೆಸ್ ಕೋಡ್ ಗೂ ಕೊರಗ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಎಂದು ಈಗಾಗಲೇ ಹಲವು ದಲಿತ ಸಮುದಾಯದ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಸಂಘಪರಿವಾರವೂ ಮುಸ್ಲಿಂ ಎಂಬ ಕಾರಣಕ್ಕೆ ಮುಸ್ಲಿಂ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಟ್ಟಾಹಾಸ ಮೆರೆಯುತ್ತಿದೆ ಪೊಲೀಸರು ಇವರಿಗೆ ಬೆಂಬಲ ನೀಡುತ್ತಿದೆ.

ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಎಸ್ ಡಿ ಪಿ ಐ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ, ಮಹಿಳಾ ಸಿಬ್ಬಂದಿಗಳ ಮೇಲೆ ಅತ್ಯಾಚಾರ ಎಸೆಗಿದ್ದಾರೆಂದು ಯಾರೂ ನಂಬಲಿಕೆ ಸಾಧ್ಯವಿಲ್ಲದ ಸುಳ್ಳು ಕೇಸ್ ದಾಖಲಿಸಿ ಬಂಧಿಸಿದ್ದಾರೆ ಆದರೆ ಸಾಲೆತ್ತೂರಿನಲ್ಲಿ ವಧುವಿನ ಮನೆ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳನ್ನು ಏಕೆ ಬಂಧಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಬಜರಂಗದಳ ಮತ್ತು ಸಂಘಪರಿವಾರದವರ ಜತೆ ಶಾಮೀಳಾಗಿ ಇಂತಹ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಸಂಘಪರಿವಾರದ ಕ್ರಿಮಿನಲ್ ಹಿನ್ನೆಲೆ ಇರುವ ಗೂಂಡಾನಾಯಕ ಶರಣ್ ಪಂಪ್ವೆಲ್ ಎನ್ನುವ ವ್ಯಕ್ತಿ ಇಲ್ಲಿನ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳಿಗೆ ” ನೀವು ಇಂತಹ ಕೆಲಸ ಮಾಡದಂತೆ ಮುಸ್ಲಿಂ ಯುವಕರಿಗೆ ಪತ್ವ ಕೊಡಬೇಕು ಎಂದು ಹೇಳುತ್ತಾರೆ. ಇಲ್ಲಿನ ಧಾರ್ಮಿಕ ಗುರುಗಳಿಗೆ ಸ್ಪಷ್ಟವಾದ ಜ್ಞಾನವಿದೆ ಅವರಿಗೆ ಭೋದನೆ ಮಾಡುವ ಸಾಮಾರ್ಥ್ಯವಿದೆ. ಅವರುಗಳು ಈಗಾಗಲೇ ಸ್ಪಷ್ಟವಾದ ನಿಲುವುಗಳನ್ನು ಕೂಡಾ ವ್ಯಕ್ತಪಡಿಸಿದ್ದಾರೆ ಶರಣ್ ಪಂಪ್ವೆಲ್ ಯಾವ ನೈತಿಕತೆ ಮೇಲೆ ಮುಸ್ಲಿಂ ಧರ್ಮಗುರುಗಳಿಗೆ ಬುದ್ಧಿವಾದ ಹೇಳುತ್ತಾರೆ? ಇಲ್ಲಿನ ಮುಸ್ಲಿಮರನ್ನು ಹೊಡೆದೊಡಿಸಬೇಕೆಂದು ಎನ್ ಆರ್ ಸಿ, ಸಿ.ಎ ಕಾನೂನುಗಳನ್ನು ತಂದು ಈ ಸಮುದಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ, ಸುಳ್ಳು ಅಪಪ್ರಚಾರ ಮಾಡುತ್ತಿರುವಂತಹ ಗೂಂಡಾ ಹಿನ್ನೆಲೆಯ ಶರಣ್ ಪಂಪ್ವಲ್ ಗೆ ಯಾವುದೇ ನೈತಿಕತೆ ಇಲ್ಲ ಎಂದು ಆರೋಪಿಸಿದರು.

ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಶಾಹುಲ್ ಹಮೀದ್, ಕ್ಷೇತ್ರ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಪುತ್ತೂರು ಎಸ್ ಡಿ ಪಿ ಐ ಜತೆ ಕಾರ್ಯದರ್ಶಿ ಅನ್ವರ್ ಪೆರುವಾಯಿ, ಕೊಳ್ನಾಡು ಬ್ಲಾಕ್ ಅಧ್ಯಕ್ಷ ಬಶೀರ್ ಕೊಳ್ನಾಡು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!