ಮೇಕೆದಾಟು ಪಾದಯಾತ್ರೆಗೆ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳದಿಂದ ನೂರಕ್ಕೂ ಹೆಚ್ಚು ಕಾಂಗ್ರೇಸ್ ಕಾರ್ಯಕರ್ತರು ಭಾಗಿ
ಬಂಟ್ವಾಳ : ರಾಜ್ಯ ಕಾಂಗ್ರೇಸ್ ವತಿಯಿಂದ ಮೇಕೆದಾಟು ಯೋಜನೆ ಪ್ರಾರಂಭಕ್ಕಾಗಿ ಪಾದಯಾತ್ರೆ ನಡೆಯುತ್ತಿದ್ದು , ದಿನೇ ದಿನೇ ಪಾದಯಾತ್ರೆಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ .

ಜ .9 ರಂದು ಪ್ರಾರಂಭವಾದ ಪಾದಯಾತ್ರೆ ಇಂದಿಗೆ ನಾಲ್ಕನೇ ದಿನಕ್ಕೆ ತಲುಪಿದೆ . ಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೇಸ್ ಕಾರ್ಯಕರ್ತರು ಪಾದಯಾತ್ರೆಗೆ ಸೇರುತಿದ್ದಾರೆ .
ಜ .13 ರಂದು ರಾಮನಗರದಿಂದ ಮಾಗಡಿ ತನಕ ನಡೆಯಲಿರುವ ಪಾದಯಾತ್ರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ 100 ಕ್ಕೂ ಮಿಕ್ಕಿ ಕಾರ್ಯಕರ್ತರು ಪಾದಯಾತ್ರೆಗೆ ಪಾಲ್ಗೊಳ್ಳಲು ಬಂಟ್ವಾಳದಿಂದ ಮೇಕೆದಾಟು ಪೋಸ್ಟರ್ ಅಂಟಿಸಿ ಕಾರಿನಲ್ಲಿ ಹೊರಟಿದ್ದಾರೆ .




