February 3, 2026

ವಿಟ್ಲ ಸಿ.ಟಿ ಲಯನ್ಸ್ ಕ್ಲಬ್ ವತಿಯಿಂದ ಆಯುಷ್ಮಾನ್ ಕಾರ್ಡ್ ನೊಂದಾವಣೆ ಮತ್ತು ವಿತರಣೆ ಕಾರ್ಯಕ್ರಮ

0
IMG_20220112_180114.jpg

ವಿಟ್ಲ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಪಟ್ಟಣ ಪಂಚಾಯತ್ ವಿಟ್ಲ, ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ  ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಬುಧವಾರ ಆಯುಷ್ಮಾನ್ ಕಾರ್ಡ್ ನೊಂದಾವಣೆ ಮತ್ತು ವಿತರಣೆ ಕಾರ್ಯಕ್ರಮವನ್ನು ಮೇದಿನಿ ಜನ ಸೇವಾ ಕೇಂದ್ರ ಪುತ್ತೂರು , ಇವರ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ  ಮಾಲಿನಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ  ಬಿ ಸಂದೇಶ ಶೆಟ್ಟಿ ವಹಿಸಿದ್ದರು.. ಲಯನ್ಸ್ ಪ್ರಾಂತೀಯ ಸಲಹೆಗಾರ ಲಯನ್ ಸುದರ್ಶನ್ ಪಡಿಯಾರ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ  ನಿರ್ಮಲ, ಮತ್ತು  ಕವಿತಾ, ಲಯನ್ ಸದಸ್ಯರಾದ ಸುರೇಶ್ ಬನಾರಿ, ಉಪಾಧ್ಯಕ್ಷರಾದ ವಸಂತ್ ಶೆಟ್ಟಿ, ಸದಸ್ಯರಾದ ದಿನಕರ ಆಳ್ವ, ಮುಂತಾದವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 75 ಜನರಿಗೆ ಆಯುಷ್ಮಾನ್ ಕಾರ್ಡನ್ನು ವಿತರಿಸಲಾಯಿತು.‌

Leave a Reply

Your email address will not be published. Required fields are marked *

error: Content is protected !!