ವಿಟ್ಲ: ಸಾರ್ವಜನಿಕ ರಸ್ತೆ ಅತಿಕ್ರಮಣ: ಜ. ೧೭ರಂದು ದಲಿತ್ ಸಂಘಟನೆ ಪ್ರತಿಭಟನೆ
ವಿಟ್ಲ: ಕನ್ನಡಗುಳಿ – ಕೂಟೇಲು ಸಾರ್ವಜನಿಕ ರಸ್ತೆಯನ್ನು ಖಾಸಗಿಯವರು ಅತಿಕ್ರಮಣ ಮಾಡಿದ್ದು, ಇದನ್ನು ತೆರವು ಮಾಡಿ ಕಾಮಗಾರಿ ನಡೆಯುವವರೆಗೆ ಮಾಣಿಲ ಗ್ರಾಮ ಪಂಚಾಯಿತಿಯ ಮುಂಭಾಗ ಜ. ೧೭ರಂದು ೧೧ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡು ಹೇಳಿದರು.
ಸುಮಾರು ೪ವರ್ಷಗಳಿಂದ ಮನವಿ ಪತ್ರ ಹಾಗೂ ಪ್ರತಿಭಟನೆಗಳನ್ನು ನಡೆಸಲಾಗಿದೆ. ಭ್ರಷ್ಟ ಅಧಿಕಾರಿಗಳಿಂದ ಕೂಡಿದ ವ್ಯವಸ್ಥೆಯಿಂದ ಮಾಣಿಲದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಪ್ರತಿಭಟನೆ ಸಂದರ್ಭ ಯಾವುದೇ ಅನಾಹುತ ನಡೆದರೂ, ಅದಕ್ಕೆ ಗ್ರಾಮ ಪಂಚಾಯಿತಿಯ ನೇರ ಹೊಣೆಯಾಗಲಿದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಯು. ವಿಟ್ಲ, ಗೌರವ ಸಲಹೆಗಾರ ಸೋಮಪ್ಪ ಸುರುಳಿಮೂಲೆ, ಗೌರವಾಧ್ಯಕ್ಷ ಗಣೇಶ್ ಸೀಗೆಬಲ್ಲೆ, ವೆಂಕಪ್ಪ ವಿಟ್ಲ ಉಪಸ್ಥಿತರಿದ್ದರು.




