ಧಾರ್ಮಿಕ ಭಾವನೆಗೆ ಧಕ್ಕೆಮಾಡಿದ ಕೃತ್ಯಕ್ಕೆ ಕೊಳ್ನಾಡು ವಲಯ ಕಾಂಗ್ರೆಸ್ ಖಂಡನೆ
ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮದುವೆ ಸಮಾರಂಭವೊಂದರಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ಧರಿಸಿ ಕುಣಿದು ಹಿಂದೂ ದಾರ್ಮಿಕ ಭಾವನೆಗೆ ಧಕ್ಕೆ ತಂದು ಕೆರಳಿಸಿರುವುದನ್ನು ಕೊಳ್ನಾಡು ವಲಯ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.ಎಲ್ಲಾ ಸರ್ವಧರ್ಮದ ಧಾರ್ಮಿಕ ಭಾವನೆಗೆ ಗೌರವ ಕೊಡುವುದು ಪ್ರಜಾಪ್ರಭುತ್ವ ಭಾರತದಲ್ಲಿ ಪ್ರಜೆಗಳ ಕರ್ತವ್ಯವಾಗಿದೆ.ಕಾಂಗ್ರೆಸ್ ಪಕ್ಷವು ಇಂತಹ ಅಹಿತಕರ ಘಟನೆಗಳನ್ನು ಖಂಡಿಸುತ್ತಾ ಬಂದಿದೆ.ಕೊಳ್ನಾಡು ಗ್ರಾಮದಲ್ಲಿ ಸಹೋದರತೆಯಲ್ಲಿ ಎಕತೆ ಎಂಬ ಸೌಹಾರ್ಧತೆಯ ಭಾವನೆಯಲ್ಲಿ ಬದುಕುತ್ತಿರುವ ಈ ಸಂಧರ್ಭದಲ್ಲಿ ಮಸಿ ಬಳಿಯುವ ಯತ್ನವೂ ನಡೆಯುತ್ತಿರುವುದು ಖೇದಕರ.ಹಿಂದೂ ಭಾವನೆಗಳನ್ನು ಕೆರಳಿಸಿರುವುದರ ವಿರುದ್ಧ ನಮ್ಮ ಗ್ರಾಮದ ಮುಸ್ಲಿಂ ಒಕ್ಕೂಟದ ಎಲ್ಲಾ ಜಮಾಅತಿಗರು ಖಂಡಿಸಿರುವುದು ಸಂತೋಷ ಮತ್ತು ಸ್ವಾಗತರ್ಹವಾಗಿದೆ.ಇದರಲ್ಲಿ ಗ್ರಾಮದ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ರಾಜಕೀಯ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡು ಗ್ರಾಮದ ಸಾಮರಸ್ಯವನ್ನು ಕೆಡಿಸಲು ಉಪಯೋಗಿಸಬಾರದು ಮತ್ತು ಗ್ರಾಮದ ಸಾಮರಸ್ಯ,ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ಕೃತ್ಯ ನಡೆಸಿದವರ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಈ ಬಾಗದ ನಿಕಟಪೂರ್ವ ಜಿ.ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ,ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಸಮುದಾಯದ ಕೆ.ಎಂ.ಲತೀಪ್ ಪರ್ತಿಪ್ಪಾಡಿ,ವಲಯ ಕಾಂಗ್ರೆಸ್ ಅದ್ಯಕ್ಷರ ಅಬ್ದುಲ್ ಖಾದರ್ ಮೂಸಾ, ಕಾರ್ಯದ್ಯಕ್ಷ ಪವಿತ್ರ ಪೂಂಜಾ,ಜೆರ್ಮಿ ಡಿಸೋಜಾ,ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಎಚ್.ಅಬ್ದುಲ್ ರಜಾಕ್ ಸೆರ್ಕಳ,ಅಬ್ದುಲ್ ಹಮೀದ್ ಸುರಿಬೈಲ್,ಅಶ್ರಪ್ ಸಾಲೆತ್ತೂರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


