March 23, 2026

ಸುಳ್ಯ: ಪಾದಾಚಾರಿ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದು ಸವಾರರು ಪರಾರಿ:
ಬಾಲಕನಿಗೆ ಗಾಯ, ಆಸ್ಪತ್ರೆಗೆ ದಾಖಲು

0
images-6.jpeg

ಸುಳ್ಯ: ಬೋರುಗುಡ್ಡೆ ಗ್ರೀನ್ ವ್ಯೂ ಶಾಲೆ ಸಮೀಪ ಹತ್ತು ವರ್ಷ ಪ್ರಾಯದ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರು ಪರಾರಿಯಾದ ಘಟನೆ ಇಂದು ವರದಿಯಾಗಿದೆ.

ಬೋರುಗುಡ್ಡೆ ನಿವಾಸಿ ಶರೀಫ್ ಎಂಬುವವರ ಪುತ್ರ ಹಾಮಿದ್ ಎಂಬಾತ ಪಕ್ಕದಲ್ಲಿ ಇರುವ ತನ್ನ ಗೆಳೆಯನ ಮನೆಗೆ ಹೋಗಿ ಮರಳುತ್ತಿದ್ದ ಸಂದರ್ಭ ನಾವೂರು ಜಟ್ಟಿಪಳ್ಳ ರಸ್ತೆ ನಡುವೆ ದ್ವಿಚಕ್ರ ವಾಹನ ವೇಗವಾಗಿ ಬಂದು ಬಾಲಕನಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ನೋಡಿದ ಸ್ಥಳೀಯರು ಕೂಡಲೇ ಬಾಲಕನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ಬಳಿಕ ಕೆವಿಜಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈ ಭಾಗದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಅತಿ ವೇಗವಾಗಿ ಚಲಿಸುತ್ತಿದ್ದ ಪಾದಚಾರಿಗಳಿಗೆ ಆತಂಕ ಉಂಟಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!