March 22, 2026

ವಿಟ್ಲ: ಆತ್ಮಹತ್ಯೆಗೈದ ಅಪ್ರಾಪ್ತ ಬಾಲಕನ ಮನೆಗೆ ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಭೇಟಿ

0
IMG-20220107-WA0002.jpg

ವಿಟ್ಲ: ಅಳಿಕೆ ಸತ್ಯಸಾಯಿ ಸೇವಾ ಕೇಂದ್ರ ಶಾಲೆಯಲ್ಲಿ ಕಲಿಯುತ್ತಿರುವ 10ನೇ ತರಗತಿ ವಿದ್ಯಾರ್ಥಿಯ ಹತ್ಮಹತ್ಯೆ ವಿಷಯ ತಿಳಿದು ಇವತ್ತು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಲು ವಿಟ್ಲಕ್ಕೆ ಆಗಮಿಸಿದ ಸಂದರ್ಭದಲ್ಲಿ SDPI ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿಗಳಾದ ಅಲ್ಫಾನ್ಸೋ ಫ್ರಾಂಕೋ ರವರು SDPI ವಿಟ್ಲ ಕಚೇರಿಗೆ ಭೇಟಿ ನೀಡಿ ಕಳೆದ ಪಟ್ಟಣ ಪಂಚಾಯತ್ ಚುನಾವಣೆ ಬಗ್ಗೆ ಮಾಹಿತಿ ಪಡೆದುಕೊಂಡು ಗೆದ್ದ ಅಭ್ಯರ್ಥಿ ಹಾಗೂ ಚುನಾವಣೆಯಲ್ಲಿ ಸ್ಪರ್ದಿಸಿದ ಇತರ 3 ಅಭ್ಯರ್ಥಿಗಳಿಗೂ ಅಭಿನಂದನೆಗಳನ್ನು ತಿಳಿಸಿ ಚುನಾವಣೆಯ ಮಾಹಿತಿ ಪಡೆದುಕೊಂಡರು.ಪಕ್ಷದ ನಾಯಕರ ಹಾಗೂ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಪಟ್ಟ ಶ್ರಮವನ್ನು ಕೊಂಡಾಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅನ್ವರ್ ಪೆರುವಾಯಿ,ಕ್ಷೇತ್ರ ಸಮಿತಿ ಸದಸ್ಯರಾದ ರಹಿಮಾನ್ ಕಂಬಳಬೆಟ್ಟು, ಪಕ್ಷದ ವಿಟ್ಲ ಬ್ಲಾಕ್ ಸಮಿತಿ ಕಾರ್ಯದರ್ಶಿ ಮುನೀರ್ ಪುಣಚ,ಪಟ್ಟಣ ಸಮಿತಿ ಕಾರ್ಯದರ್ಶಿ ಸಿರಾಜ್ ಕಡಂಬು, ಕಾರ್ಯಕರ್ತರಾದ ರಹಿಮಾನ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!