March 19, 2026

ಬ್ಯಾಟ್ ನಿಂದ ಪತ್ನಿ ಮತ್ತು ಮಕ್ಕಳನ್ನು ಕೊಂದು, ಪತಿ ಆತ್ಮಹತ್ಯೆ ಗೆ ಶರಣು

0
Gambling-addiction_770_1200x768.jpeg

ಚೆನ್ನೈ: 36 ವರ್ಷದ ವ್ಯಕ್ತಿಯೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪೆರುಂಗುಡಿಯಲ್ಲಿ ನಡೆದಿದೆ.

ಪೆರುಂಗುಡಿಯಲ್ಲಿ ಅಪಾರ್ಟ್ ಮೆಂಟ್ ನಲ್ಲಿ 35 ವರ್ಷದ ಮಣಿಕಂಡನ್ ನೆಲೆಸಿದ್ದರು. ಇಂದು ಮನೆಯ ಬಾಗಿಲು ಮುಚ್ಚಿದ್ದರಿಂದ ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಹೊಡೆದು ನೋಡಿದಾಗ ಮಣಿಕಂಡನ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿತ್ತು.

ಪೊಲೀಸರ ಪ್ರಕಾರ, ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಡನ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪತ್ನಿ ತಾರ ಪ್ರಿಯಾ (30)ರನ್ನು ಕ್ರಿಕೆಟ್ ಬ್ಯಾಟ್‌ನಿಂದ ಕೊಂದು ತನ್ನ ನಂತರ ಇಬ್ಬರು ಮಕ್ಕಳಾದ ತರಣ್ (11) ಮತ್ತು ಒಂದೂವರೆ ವರ್ಷದ ತಗನ್ ನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ದಂಪತಿ ನಡುವೆ ಸಾಲದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಪದ ಭರದಲ್ಲಿ ಮಣಿಕಂಡನ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದು ತಾನೂ ನೇಣು ಹಾಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪರಾಧ ನಡೆದ ಸ್ಥಳವನ್ನು ನೋಡಿದಾಗ, ಮಣಿಕಂಡನ್ ಮೊದಲು ತನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ತನ್ನ ಇಬ್ಬರು ಗಂಡುಮಕ್ಕಳನ್ನು ಕತ್ತು ಹಿಸುಕಿ ಕೊನೆಗೆ ನೇಣು ಹಾಕಿಕೊಂಡಿರಬೇಕು ಎಂದು ಪೊಲೀಸರು ಹೇಳಿದ್ದಾರೆ.

ಮಣಿಕಂಡನ್ ಆನ್‌ಲೈನ್ ಜೂಜಾಟದ ಚಟ ಹೊಂದಿದ್ದ ಎನ್ನಲಾಗಿದ್ದು, ಇದು ಆತನ ಪತ್ನಿಯ ನಡುವೆ ಜಗಳಕ್ಕೆ ಕಾರಣವಾಗಿತ್ತು. ಮಣಿಕಂಡನ್ ಅವರ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಅವರು ಚೆನ್ನೈಗೆ ತೆರಳುತ್ತಿದ್ದಾರೆ. ಹೆಚ್ಚಿನ ತನಿಖೆ ಮತ್ತು ವಿಚಾರಣೆಯಿಂದ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!