October 1, 2026

ಬಹುಕೋಟಿ ಚಿನ್ನ ಕಳ್ಳಸಾಗಣೆ  ಪ್ರಕರಣ: ನಟಿ ರನ್ಯಾರಾವ್‌ಗೆ 89.91 ಕೋಟಿ ರೂ. ದಂಡ

0
image_editor_output_image1442760164-1790826509643

ಬೆಂಗಳೂರು: ಬಹುಕೋಟಿ ಚಿನ್ನ ಕಳ್ಳಸಾಗಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ನಟಿ ರನ್ಯಾರಾವ್‌ಗೆ ಕಸ್ಟಮ್ಸ್ ಇಲಾಖೆಯು ಬರೋಬ್ಬರಿ 89.91 ಕೋಟಿ ರೂ. ದಂಡ ವಿಧಿಸಿ ಐತಿಹಾಸಿಕ ಆದೇಶ ಹೊರಡಿಸಿದೆ.

ಈ ಮಹತ್ವದ ಪ್ರಕರಣದ ಸಂಪೂರ್ಣ ವಿವರ ಹಾಗೂ ದಾಖಲೆಗಳು ಪಬ್ಲಿಕ್ ಟಿವಿಗೆ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಾಗಿವೆ. ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಹೊರಡಿಸಿರುವ 399 ಪುಟಗಳ ಸುದೀರ್ಘ ಆದೇಶದಲ್ಲಿ ನಟಿ ರನ್ಯಾರಾವ್ ಅಂತರರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಲಾಗಿದೆ.

 

ದಂಡದ ಮೊತ್ತ ಹಾಗೂ ಆದೇಶದ ಅಧಿಕೃತ ಪ್ರತಿಯನ್ನು ಕಸ್ಟಮ್ಸ್ ಇಲಾಖೆ ಈಗಾಗಲೇ ರನ್ಯಾರಾವ್‌ಗೆ ಕಳುಹಿಸಿದೆ.

Leave a Reply

Your email address will not be published. Required fields are marked *

error: Content is protected !!