ಉಡುಪಿ: ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ- ಇಬ್ಬರ ಬಂಧನ
ಉಡುಪಿ: ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತುಗಳನ್ನು ಇಟ್ಟುಕೊಂಡು ಬೆಂಗಳೂರಿನಿಂದ ತಂದು ಉಡುಪಿ, ಪೆರಂಪಳ್ಳಿ, ಮಣಿಪಾಲ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಣಿಪಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿಯ ಉದ್ಯಾವರದ ಅಕ್ಬರ್ ಮುಹಮ್ಮದ್ (44) ಹಾಗೂ ಬೆಂಗಳೂರಿನ ಸೈಯದ್ ಸುಹೇಲ್ (26) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಇದ್ದ ಸುಮಾರು ಒಂದು ಲಕ್ಷ ರೂ ಮೌಲ್ಯದ ಒಟ್ಟು 30 ಗ್ರಾಂ ತೂಕದ MDMA ಮಾದಕ ವಸ್ತು ಹಾಗೂ 40000 ರೂ ಮೌಲ್ಯದ 4 ಮೊಬೈಲ್, 5000 ರೂ ಮೌಲ್ಯದ 01 ಡೊಂಗಲ್ ಮತ್ತು 9500 ರೂ. ನಗದು ಹಣ ಸೇರಿದಂತೆ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.




