ಎರಡು ಎಟಿಎಂನಲ್ಲಿ ಕಳ್ಳತನ: 14 ಲಕ್ಷ ರೂ. ದೋಚಿ ಪರಾರಿ
ಹುಬ್ಬಳ್ಳಿ:ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿನ ಎರಡು ಎಟಿಎಂಗಳನ್ನು ಕಳ್ಳರು ದೋಚಿದ್ದಾರೆ.
ಬೆಳಗಿನ ಜಾವ 3 ಗಂಟೆ ವೇಳೆಗೆ ಶೆಟರ್‌ನ ಲಾಕ್ ಮುರಿದು, ಗ್ಯಾಸ್ ಕಟರ್ ಬಳಿಸಿ ಒಟ್ಟು 14 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ್ದಾರೆ. ಗುರುತು ಪತ್ತೆಯಾಗದಂತೆ ಸಿಸಿ ಕ್ಯಾಮೆರಾವನ್ನು ಕಳ್ಳರು ದ್ವಂಸ ಮಾಡಿದ್ದಾರೆ. ಗ್ರಾಮದ ನಡುರಸ್ತೆಯಲ್ಲಿ ಈ ಎಟಿಎಂಗಳಿದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.






