September 11, 2026

ಸೆ.14ರಂದು ಬಾಕ್ರಬೈಲಿನಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0
image_editor_output_image1554070831-1789069339648

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾಕ್ರಬೈಲು ವತಿಯಿಂದ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.೧೪ರ ಸೋಮವಾರ ಬಾಕ್ರಬೈಲಿನ ಶ್ರೀ ಸೂರ್ಯೆಶ್ವರ ಕಲಾ ವೃಂದದ ವಠಾರದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬೆಳಿಗ್ಗೆ 9:00ಕ್ಕೆ ಸರಿಯಾಗಿ ಮೆದು ತಿರುಮಲೇಶ್ವರ ಭಟ್ ಇವರ ದಿವ್ಯ ಹಸ್ತದಲ್ಲಿ ಶ್ರೀ ಮಹಾ ಗಣಪತಿ ಹೋಮ ಪೂರ್ವಕವಾಗಿ   ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆದು. ಬೆಳಿಗ್ಗೆ ಗಂಟೆ 10 ಕ್ಕೆ ಸರಿಯಾಗಿ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಸಂಗೀತ ಸ್ಪರ್ಧೆ ನಂತರ ಪಾತೂರು ಶ್ರೀ ಸೂರ್ಯೆಶ್ವರ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ  12:30 ಕ್ಕೆ ಸರಿಯಾಗಿ ಮಹಾಪೂಜೆ  ಮಂಗಳಾರತಿಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 

ಮಧ್ಯಾಹ್ನ ಗಂಟೆ 1:30ಕ್ಕೆ ಸರಿಯಾಗಿ ಪಾಂಚಜನ್ಯ ಸುಘೋಷ ಯಕ್ಷನಾಟ್ಯಾಲಯ ಮಂಜನಾಡಿ ಇವರಿಂದ ಇಂದ್ರಜಿತು ಕಾಳಗ ತರಣಿಸೇನ ಕಾಳಗ ಎಂಬ ಯಕ್ಷಗಾನ ಬಯಲಾಟ ಸಂಜೆ ಗಂಟೆ 4:45 ಕ್ಕೆ ಸರಿಯಾಗಿ ನಡೆಯಲಿದೆ. ಶ್ರೀ ದೇವರ ಮಹಾ ಮಂಗಳಾರತಿಯಾಗಿ ಶ್ರೀ ದೇವರ ದಿಗ್ವಿಜಯೋತ್ಸವ ವು ಬಹು ವಿಜ್ರಂಬಣೆಯಿಂದ  ಗಣೇಶ ಮಂದಿರದಿಂದ ಹೊರಟು ಬಾಕ್ರಬೈಲು –  ಕಡೆಮಜಲು – ತಲಕ್ಕಿ – ಕೂಡುರಸ್ತೆ – ಕಟ್ಟತ್ತಿಲ ಮಾರ್ಗವಾಗಿ ಕಟ್ಟತ್ತಿಲ ನದಿಯಲ್ಲಿ ಶ್ರೀ ದೇವರ ಜಲಸ್ತಂಭನ ವಾಗಲಿದೆ.  ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತನು ಮನ ಧನಗಳೊಂದಿಗೆ ಸಹಕರಿಸುವಂತೆ ಸಮಿತಿಯ ವತಿಯಿಂದ ವಿನಮ್ರ ವಿನಂತಿ.

Leave a Reply

Your email address will not be published. Required fields are marked *

error: Content is protected !!