ಕುಡ್ತಮುಗೇರು: TOP & TOP ಚಾರಿಟೇಬಲ್ ಟ್ರಸ್ಟ್ ನ 8ನೇ ವಾರ್ಷಿಕೋತ್ಸವ: 80 ಮಂದಿ ಹಿತೈಷಿಗಳಿಗೆ ವೇದಿಕೆಯಲ್ಲಿ ಸನ್ಮಾನ-ಖ್ಯಾತ ಜಿಮ್ ಮಾಸ್ಟರ್ ಸುನಿಲ್ ಪಾಯಸ್ ಮತ್ತು ತಂಡದಿಂದ ರೋಮಾಂಚಕ ದೇಹದಾರ್ಢ್ಯ ಪ್ರದರ್ಶನ
ಕುಡ್ತಮುಗೇರು: “ಸೇವೆಗಾಗಿ ಬಾಳು” ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಎಂಟು ವರ್ಷಗಳಿಂದ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕುಡ್ತಮುಗೇರುವಿನ ‘TOP & TOP ಚಾರಿಟೇಬಲ್ ಟ್ರಸ್ಟ್ (ರಿ)’ ಇದರ 8ನೇ ವಾರ್ಷಿಕೋತ್ಸವ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮವು ಆಗಸ್ಟ್ 15ರಂದು ಕುಡ್ತಮುಗೇರುವಿನ ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಂಡಿತು.

*ಬೆಳಗ್ಗಿನ ಧ್ವಜಾರೋಹಣ ಕಾರ್ಯಕ್ರಮ*
ಅಂದು ಬೆಳಗ್ಗೆ 10:00 ಗಂಟೆಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷರು ಹಾಗೂ ಪ್ರಗತಿಪರ ಕೃಷಿಕರಾದ ಚಿತ್ತರಂಜನ್ ಶೆಟ್ಟಿ ಕರೈ, ಟ್ರಸ್ಟ್‌ನ ಅಧ್ಯಕ್ಷರಾದ ಹಕ್ಕಿಂ ಪರ್ತಿಪ್ಪಾಡಿ, ಗೌರವಾಧ್ಯಕ್ಷರಾದ ಶಶಿಕುಮಾರ್ ಭಟ್ ಪಡಾರು, ಉಪಾಧ್ಯಕ್ಷರಾದ ಪವಿತ್ರ ಪೂಂಜಾ, ಗೌರವ ಸಲಹೆಗಾರರಾದ ದಿವಾಕರ್ ಆಚಾರ್ಯ, ಗಂಗಾಧರ್ ಟೈಲರ್, ಉಮ್ಮರ್ ಕುಡ್ತಮುಗೇರು, ನಜೀರ್ ಬಿಸಿ ರೋಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.

*ಭವ್ಯ ಸಮಾರೋಪ ಹಾಗೂ ಗಣ್ಯರ ಉಪಸ್ಥಿತಿ*
ರಾತ್ರಿ 7:00 ಗಂಟೆಗೆ ನಡೆದ ಭವ್ಯ ಸಮಾರೋಪ ಸಮಾರಂಭದಲ್ಲಿ ಗಣ್ಯರ ದಂಡೇ ಸೇರಿತ್ತು. ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಎಂ.ಎಸ್. ಮಹಮ್ಮದ್, ವಿಟ್ಲಪಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ ಕರ್ಕಳ, ಪಂಚಾಯತ್ ರಾಜ್ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ಕುಳಾಲು, ಹಜಾಜ್ ಸಮೂಹ ಸಂಸ್ಥೆಗಳ ಹನೀಫ್ ಹಾಜಿ, ಗೋಳ್ತಮಜಲು-ಕೊಳ್ನಾಡು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು, ಎಬಿ ಸಮೂಹ ಸಂಸ್ಥೆಗಳ ಎ.ಬಿ. ಅಬ್ದುಲ್ಲ,
ಶಾಕಿರ್ ಅಳಕೆಮಜಲು,
ಸೇರಿದಂತೆ ಅನೇಕ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.
ಗ್ಯಾರೇಜ್ ಮಾಲಕ ಸಂಘದ ಕೋಶಾಧಿಕಾರಿಗಳಾದ ಶೇಖರ್ ಭಟ್ ಪಡಾರು, ಪ್ರಾಸ್ತಾವಿಕ ಮಾತುಗಳಾಡಿದರು.
80 ಹಿತೈಷಿಗಳಿಗೆ ಗೌರವ ಹಾಗೂ 6 ಸಾಧಕರಿಗೆ ಪೌರ ಸನ್ಮಾನ:
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಟ್ರಸ್ಟ್‌ನ ಸೇವಾ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತಿರುವ 80 ಮಂದಿ ಹಿತೈಷಿಗಳನ್ನು (Well Wishers) ಈ ವೇದಿಕೆಯಲ್ಲಿ ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.

*ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಈ ಕೆಳಗಿನ 6 ಮಂದಿ ಗಣ್ಯರಿಗೆ ಪ್ರತಿಷ್ಠಿತ ‘ಪೌರ ಸನ್ಮಾನ’ ನೀಡಿ ಪುರಸ್ಕರಿಸಲಾಯಿತು*
ಖ್ಯಾತ ಸಮಾಜಸೇವಕ ಶ್ರೀ ಈಶ್ವರ್ ಮಲ್ಪೆ
ಖ್ಯಾತ ಜಿಮ್ ಮಾಸ್ಟರ್ ಶ್ರೀ ಸುನಿಲ್ ಪಾಯಸ್
ಹೆಲ್ತ್ ಕೇರ್ ಎಕ್ಸಲೆನ್ಸ್ ಪುರಸ್ಕೃತ ಶ್ರೀ ಚೇತನ್ ಪ್ರಕಾಶ್ ಕಜೆ
ಟ್ರಸ್ಟ್‌ನ ಗೌರವಾಧ್ಯಕ್ಷರಾದ ಶ್ರೀ ಶಶಿಕುಮಾರ್ ಭಟ್ ಪಡಾರು
ಯಶಸ್ವಿ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕರಾದ ಡಾ. ರಮೇಶ್ ಚಂದ್ರ ಪಿ.ಜಿ., ಬಲಿಪಗುಳಿ
ಖ್ಯಾತ ಸಮಾಜ ಸೇವಕರು ಹಾಗೂ ಸಾಗರ್ ಫ್ಯಾಶನ್ ಮಾಲಕರಾದ ಶ್ರೀ ಅಬ್ದುಲ್ ಲತೀಫ್
ಮೊದಲಾದವರಿಗೆ ಪೌರ ಸನ್ಮಾನ ನಡೆಸಲಾಯಿತು
*ಕಾರ್ಯಕ್ರಮದ ವಿಶೇಷ ಆಕರ್ಷಣೆಗಳು*
ಸಮಾಜಸೇವೆಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಆಪತ್ಬಾಂಧವ ಶ್ರೀ ಈಶ್ವರ್ ಮಲ್ಪೆ ಅವರ ಆಗಮನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಖ್ಯಾತ ಜಿಮ್ ಮಾಸ್ಟರ್ ಸುನಿಲ್ ಪಾಯಸ್ ಮತ್ತು ತಂಡದಿಂದ ನಡೆದ ರೋಮಾಂಚಕ ದೇಹದಾರ್ಢ್ಯ ಪ್ರದರ್ಶನವು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮಕ್ಕೆ ಮೊದಲು ಆಗಮಿಸಿದ 100 ಮಂದಿಗೆ ಉಚಿತ ಅದೃಷ್ಟ ಕೂಪನ್ ನೀಡಲಾಗಿದ್ದು, ಅದೃಷ್ಟಶಾಲಿ 6 ಮಂದಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
*ಸಕ್ರಿಯ ಕಾರ್ಯಕರ್ತರ ಶ್ರಮ*
ಕಾರ್ಯಕ್ರಮದ ಯಶಸ್ಸಿನಲ್ಲಿ ಟ್ರಸ್ಟ್‌ನ ಸಕ್ರಿಯ ಪದಾಧಿಕಾರಿಗಳಾದ ವೇಣುಗೋಪಾಲ್ ಆಚಾರ್ಯ, ಸಿ.ಎಚ್. ಅಬೂಬಕರ್, ಅಬ್ದುಲ್ ಖಾದರ್ ಕುಡ್ತಮುಗೇರು, ಮೆಹಬೂಬ್ ಮಾದಕಟ್ಟೆ, ಹರಿಶ್ಚಂದ್ರ ಟೈಲರ್, ಸಿ.ಎಚ್. ರಜಾಕ್, ಅಬೂಬಕರ್ ಪರ್ತಿಪ್ಪಾಡಿ, ಸಂದೇಶ್ ವೇಗಸ್, ಆಸಿಫ್ ಕರೈ, ಶಕೀಕ್, ರಫೀಕ್ ತಾಜ್, ದಿವಾಕರ್ ಆಚಾರ್ಯ, ಉಸ್ಮಾನ್ ಕುಡ್ತಮುಗೇರು, ಧರೇಶ್ ಸಾಲೆತ್ತೂರು, ಹಂಝ ಕೆಳಗಿನ ಬಾರೆಬೆಟ್ಟು, ಸತೀಶ್ ಆಲಂಗಾರು, ಅಶ್ರಪ್ ಬಸಬೆಟ್ಟು, ಸವಾದ್ ಮೆಡ್ಸಿಟಿ , ಮುಸ್ತಾಫ ಕೆಯಂ,ನೌಫಲ್,
ಸೇರಿದಂತೆ ಹಲವರು ಶ್ರಮಿಸಿದರು.
ಕಠಿಣ ಸವಾಲುಗಳ ಮಧ್ಯೆ ಸಾಗಿದ ಟ್ರಸ್ಟ್‌ನ ಎಂಟು ವರ್ಷಗಳ ಸೇವೆ, ಸಾಧನೆ, ಸೌಹಾರ್ದ ಮತ್ತು ದೇಶಾಭಿಮಾನದ ಈ ಮಹಾಸಂಗಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂತು.
ಟ್ರಸ್ಟ್‌ನ ಕಾನೂನು ಸಲಹೆಗಾರರಾದ ಮಹಮ್ಮದ್ ಗಜಾಲಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





