ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ದೃಢ:
ಶೌಚಾಲಯದಲ್ಲಿ ಐದು ಘಂಟೆ ಐಸೊಲೇಶನ್
ಶಿಕಾಗೋ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಶೌಚಾಲಯದಲ್ಲೇ ಐಸೊಲೇಟ್ ಆದ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ ಮಹಿಳೆಗೆ ಮಾರ್ಗಮಧ್ಯೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಬಳಿಕ ಐದು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದಾರೆ ಎಂದು ವರದಿಯಾಗಿದೆ.
ಮಾರಿಸಾ ಫೋಟಿಯೊ ಎಂಬ ಮಹಿಳೆ ವಿಮಾನ ಪ್ರಯಾಣಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿರಬೇಕಾದರೆ ಆಕೆಗೆ ಗಂಟಲು ನೋವು ಪ್ರಾರಂಭವಾಗಿದ್ದು, ಆಕೆ ತಕ್ಷಣ ಶೌಚಾಲಯಕ್ಕೆ ತೆರಳಿ ರ್‍ಯಾಪಿಡ್ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆಕೆ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದಾರೆ.
ಮಾರಿಸಾ ಫೋಟಿಯೊ ತನ್ನ ಕಥೆಯನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ತಾನು ಐಸ್ಲ್ಯಾಂಡ್ ಗೆ ಹಾರುತ್ತಿದ್ದ ಸಂದರ್ಭದಲ್ಲಿ ಗಂಟಲು ನೋಯಿಸಲು ಪ್ರಾರಂಭಿಸಿದಾಗ, ತಾನು ಸ್ವಯಂ ಪರೀಕ್ಷೆಯನ್ನು ತೆಗೆದುಕೊಂಡಿದ್ದೇನೆ. ಆದರೆ ತನಗೆ ಪಾಸಿಟಿವ್ ರಿಸಲ್ಟ್ ಬಂದಿದೆ ಎಂದು ಹೇಳಿದ್ದಾರೆ.
ತಾನು ಫ್ಲೈಟ್ ಅಟೆಂಡೆಂಟ್ ಜೊತೆ ಮಾತನಾಡಿದ್ದು, ಮತ್ತು ಆಕೆಯ ಉಳಿದ ವಿಮಾನಯಾನ ವನ್ನು ಸ್ನಾನಗೃಹದಲ್ಲಿ ಕಳೆಯಲು ನಿರ್ಧರಿಸಿದಳು ಎಂದು ಹೇಳಿದ್ದಾರೆ.