July 4, 2026

ಗುಂಡ್ಯ: ಕಾರಿಗೆ ಕಂಟೈನರ್ ಡಿಕ್ಕಿ: ಕಾರು ಸಂಪೂರ್ಣ ಜಖಂ

0
image_editor_output_image-449081961-1783133864714

Oplus_16908288

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಕಾರೊಂದಕ್ಕೆ ಕಂಟೈನರ್‌ವೊಂದು ಡಿಕ್ಕಿ ಹೊಡೆದು ಕಾರು ಜಖಂ ಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.

ಬೇಲೂರಿನ ಸೋಂಪುರ ನಿವಾಸಿಯಾಗಿರುವ ಹರ್ಷ ಟಿ. ಎಂಬವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳನ್ನು ಕರೆದೊಯ್ಯಲೆಂದು ಮಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡ್ಯದ ತಿರುವು ರಸ್ತೆಯಲ್ಲಿ ಕಂಟೈನ‌ರ್ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಹರ್ಷ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Leave a Reply

Your email address will not be published. Required fields are marked *

error: Content is protected !!