ಬ್ರಹ್ಮಾವರ: ತಲೆಗೆ ತೆಂಗಿನಕಾಯಿ ಬಿದ್ದು ಮಗು ಮೃತ್ಯು
ಬ್ರಹ್ಮಾವರ: ಹೆತ್ತ ತಾಯಿ ತನ್ನ ಹಿರಿಯ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ, ಕಂಕುಳಲ್ಲಿದ್ದ ಒಂದೂವರೆ ವರ್ಷದ ಗಂಡು ಮಗುವಿನ ತಲೆಗೆ ಅಚಾನಕ್ಕಾಗಿ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಹೆರಂಜೆಯಲ್ಲಿ ಮಂಗಳವಾರ ಸಂಭವಿಸಿದೆ.
ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ಹಾಗೂ ಗೃಹಿಣಿ ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಪುತ್ರನೇ ಮೃತಪಟ್ಟ ದುರ್ದೈವಿ.
ಸಾಮಾನ್ಯವಾಗಿ ತಾಯಿ ಸುಚಿತ್ರಾ ಅವರು ತನ್ನ 6 ವರ್ಷದ ಹಿರಿಯ ಮಗಳನ್ನು ಶಾಲಾ ಬಸ್ ಹತ್ತಿಸಲು ಹೋಗುವಾಗ ಈ ಪುಟ್ಟ ಮಗುವನ್ನು ಕರೆದೊಯ್ಯುತ್ತಿರಲಿಲ್ಲ. ವಿಶೇಷವಾಗಿ ಮಳೆ ಬರುವಾಗ ಕೊಡೆ ಹಿಡಿಯಬೇಕಾದ ಕಾರಣ ಮಗುವನ್ನು ಮನೆಯಲ್ಲೇ ಬಿಡುತ್ತಿದ್ದರು. ಆದರೆ ಮಂಗಳವಾರ ಮಗಳ ಶಾಲಾ ಬಸ್ ಬರುವ ಸಮಯಕ್ಕೆ ಮಳೆ ನಿಂತಿದ್ದರಿಂದ, ಸುಚಿತ್ರಾ ಅವರು ಪುಟ್ಟ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡು ಹೊರಟಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು




