ಒಕ್ಕೆತ್ತೂರು: ಸರಕಾರಿ ಶಾಲೆಯಲ್ಲಿ ವನಮಹೋತ್ಸವ
ಜೂನ್ 10 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಕ್ಕೆತ್ತೂರು ಶಾಲೆಯಲ್ಲಿ ಹಸಿರೇ ಉಸಿರು ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸತೀಶ್ ಲುಕ್ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಪರಿಸರವನ್ನು ನಾವು ಯಾಕೆ ಉಳಿಸಬೇಕು ಪರಿಸರ ನಾಶವಾದರೆ ಅದರ ದುಷ್ಪರಿಣಾಮ ಮಾನವ ಕುಲಕ್ಕೆ ಹಾನಿ ಎಂಬುದರ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಮ್ಮದ್ ಹಾರೀಸ್ ಸಿ ಎಚ್ ಹಾಗೂ ಪ್ರಭಾರ ಮುಖ್ಯ ಶಿಕ್ಷಕಿ ಮಮತಾರವರು ಪರಿಸರ ದಿನಾಚರಣೆ ಮಹತ್ವವನ್ನು ತಿಳಿಸಿದರು.
ಕೆಲಿಂಜ ಉಪವಲಯ ಅರಣ್ಯಾಧಿಕಾರಿ ಕೃಷ್ಣ ಜೋಗಿ ಶುಭನುಡಿ ನುಡಿದರು. ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.
ಶಾಲಾ ಸಹ ಶಿಕ್ಷಕ ಜಯಪ್ರಕಾಶ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದ್ದರು. ಸಹ ಶಿಕ್ಷಕಿ ಯಶಸ್ವಿನಿ ಅವರು ವಂದಿಸಿದರು. ಸಹ ಶಿಕ್ಷಕಿರಾದ ಮಿಸ್ರಿಯಾˌ ಪವಿತ್ರˌ ಪ್ರಿಯಲತಾ ಸಹಕರಿಸಿದರು.ಮೂ




