June 5, 2026

ಪೋಷಕರ ನಿರ್ಲಕ್ಷ: ನಿಲ್ಲಿಸಿದ್ದ ಕಾರಿನಲ್ಲಿಯೇ ಉಸಿರುಗಟ್ಟಿ 3 ವರ್ಷದ ಬಾಲಕ ಮೃತ್ಯು

0
image_editor_output_image781845300-1780604198362.jpg

ಕಲಬುರಗಿ: ಕಲಬುರಗಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ನಿಲ್ಲಿಸಿದ್ದ ಕಾರಿನಲ್ಲಿಯೇ ಉಸಿರುಗಟ್ಟಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಪೋಷಕರ ಒಂದು ಸಣ್ಣ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದು, ಕೊಟ್ಟುರೇಶ್ವರ ಎಂಬುವವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ.

ಕಾರಿನಲ್ಲಿ ಮಗುವನ್ನ ಕರೆದುಕೊಂಡು ಶಾಲೆಗೆ ಹೋಗಿದ್ದ ಪೋಷಕರು, ಶಾಲೆ ಬಳಿ ಕಾರು ಪಾರ್ಕ್ ಮಾಡಿ ಲಾಕ್ ಮಾಡದೇ ಹೊಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕಾರಿನೊಳಗೆ ಹೋಗಿದೆ. ನಂತರ ಕಾರಿನ ಎಲ್ಲಾ ಡೋರ್‌ಗಳು ಲಾಕ್ ಆಗಿವೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಗು ಎಲ್ಲಿ ಹೋಯಿತು ಅಂತ ಹುಡುಕಾಡಿದ್ದ ಪೋಷಕರು ಬಳಿಕ ಕಾರು ಡೋರ್ ಓಪನ್ ಮಾಡಿ ನೋಡಿದಾಗ ದುರಂತ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!