ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ
ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಇದರ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ದಿನಾಂಕ 01/06/2026 ರ ಸೋಮವಾರದಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಶಾಲಾ ವಾದ್ಯಗೋಷ್ಠಿಯೊಂದಿಗೆ ಕಾರ್ಯಕ್ರಮದ ಅತಿಥಿಗಳು ಹಾಗೂ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ವಂದನೀಯ ಫಾ ಮೈಕಲ್ ಲೋಬೋ , ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರು ಶ್ರೀಯುತ ವಲೇರಿಯನ್ ವೇಗಸ್ , ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಎಡ್ವರ್ಡ್ ರೋಡ್ರಿಗಸ್ ಹಾಗೂ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ ಅಮಿತ್ ಪ್ರಕಾಶ್ ರೋಡ್ರಿಗಸ್, ಸಿ ಮರೀನಾ ಉಪಸ್ಥಿತರಿದ್ದರು. ಧರ್ಮಗ್ರಂಥಗಳ ವಾಚನದೊಂದಿಗೆ, ಪ್ರಾರ್ಥನಾ ವಿಧಿ, ಸ್ವಾಗತ ನೃತ್ಯದೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಗೌರವಿಸಲಾಯಿತು. ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ ಅಮಿತ್ ಪ್ರಕಾಶ್ ರೋಡ್ರಿಗಸ್ ಮಾತಿನ ತೋರಣದೊಂದಿಗೆ ಎಲ್ಲರನ್ನು ಸ್ವಾಗತಿಸಿ ಗೌರವಿಸಿದರು.
ಹಾಗೆಯೇ ನೂತನ ಶಾಲಾ ಸಂಚಾಲಕರಾದ ವಂ ಫಾ ಮೈಕಲ್ ಲೋಬೋ ಇವರನ್ನು ಆದರದಿಂದ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು. ಹಾಗೆಯೇ ನೂತನ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಸ್ವಾಗತಿಸಲಾಯಿತು, ತದನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ಸಾಧನೆಗೈದ ವಿದ್ಯಾರ್ಥಿಗಳನ್ನು, ಸಹಕಾರ ನೀಡಿದ ಶಿಕ್ಷಕರನ್ನು , ಸ್ಕೌಟ್ ಆಂಡ್ ಗೈಡ್ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶಾಲಾ ಪ್ರಾಂಶುಪಾಲರು ಶಾಲಾ ಪಕ್ಷಿನೋಟವನ್ನು ಬೀರಿ ಎಲ್ಲರಿಗೂ ಶುಭ ಹಾರೈಸಿದರು. ವಿಧಾರ್ಥಿಗಳಿಗೆ ಸಿಹಿ ತಿಂಡಿಯೊಂದಿಗೆ ನೂತನ ಶೈಕ್ಷಣಿಕ ವರ್ಷಕ್ಕೆ ಸಿಹಿ ಸಿಹಿಯಾಗಿ ಬರಮಾಡಿಕೊಂಡು ಆದರ್ಶ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.





