June 1, 2026

ಎಂ.ಫ್ರೆಂಡ್ಸ್ ಟ್ರಸ್ಟ್ ಚೆಯರ್ಮೆನ್ ಆಗಿ ಝಕರಿಯಾ ಜೋಕಟ್ಟೆ, ಕಾರ್ಯಾಧ್ಯಕ್ಷರಾಗಿ ಸುಜಾಹ್ ಮಹಮ್ಮದ್ ಪುನರಾಯ್ಕೆ

0
IMG-20260601-WA0003

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ದ್ವೈವಾರ್ಷಿಕ ಮಹಾಸಭೆಯು ಭಾನುವಾರ ಸಂಜೆ ಅಡ್ಯಾರ್ ಹಿಲ್ಸ್ ನಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ ಎಂ.ಫ್ರೆಂಡ್ಸ್ ಚೆಯರ್ಮೆನ್ ಝಕರಿಯ ಜೋಕಟ್ಟೆ ಅವರು ಮಾತನಾಡಿ ಒಂದು ಸಂಸ್ಥೆಯ ಬೆಳವಣಿಗೆ ಅದರ ಸದಸ್ಯರ ನಡವಳಿಕೆ ಮೇಲೆ ಅವಲಂಬಿತ ವಾಗಿದೆ. ಎಲ್ಲರನ್ನೂ ಒಗ್ಗೂಡಿಸಿ ಸಮಾನ ಮನಸ್ಸಿನಿಂದ ಮುಂದುವರಿದ ಕಾರಣ ಎಂ.ಫ್ರೆಂಡ್ಸ್ ದಿನಗಳೆದಂತೆ ಅಭಿವೃದ್ಧಿ ಮುನ್ನಡೆಯುತ್ತಿದೆ. ಸಾವಿರಾರು ಫಲಾನುಭವಿಗಳು ಸಂಸ್ಥೆಯ ಸದುಪಯೋಗವನ್ನು ಪಡೆದುಕೊಂಡು ಪ್ರಾರ್ಥಿಸಿದ್ದಾರೆ. ಇದಕ್ಕಿಂತ ಖುಷಿ ಇನ್ನೇನಿದೆ ಎಂದು ಹೇಳಿದರು.

ಕಾರ್ಯಾಧ್ಯಕ್ಷರಾದ ಸುಜಾಹ್ ಮಹಮ್ಮದ್ ಪ್ರಸ್ತಾವಿಕವಾಗಿ ಮಾತನಾಡಿ ಕಳೆದೆರಡು ವರ್ಷಗಳಲ್ಲಾದ ಅಭಿವೃದ್ಧಿಯ ಕುರಿತು ಸಮಗ್ರ ವಿವರಣೆ ನೀಡಿದರು.

ಎನ್ನಾರೈ ಸದಸ್ಯರಾದ ಶರೀಫ್ ವೈಟ್ ಸ್ಟೋನ್, ಮಹಮ್ಮದ್ ಫಾರೂಕ್ ಜುಬೈಲ್, ಮುಹ್ಸಿನ್ ಮೊಯ್ದಿನ್, ಅಶ್ರಫ್ ಬರಕಾ, ಹಾರಿಸ್ ಕಾನತ್ತಡ್ಕ, ಕಾರುಣ್ಯ ಯೋಜನೆಯ ನಿರ್ದೇಶಕ ಮಹಮ್ಮದ್ ಹನೀಫ್ ಗೋಳ್ತಮಜಲು, ಕ್ಲಾಸ್ ಆನ್ ವೀಲ್ಸ್ ಯೋಜನೆಯ ನಿರ್ದೇಶಕ ರಶೀದ್ ವಿಟ್ಲ ಉಪಸ್ಥಿತರಿದ್ದರು. ಇದೇ ಸಂದರ್ಭ ನ್ಯಾಯವಾದಿಯಾಗಿ ಉತ್ತೀರ್ಣರಾದ ಹಕೀಮ್ ಕಲಾಯಿ ಅವರನ್ನು ಅಭಿನಂದಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪಡುಬಿದ್ರಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಝುಬೈರ್ ಬುಳೇರಿಕಟ್ಟೆ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಡಾ. ಮುಬಶ್ಶಿರ್ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ಅನ್ವರ್ ಹುಸೈನ್ ವಂದಿಸಿದರು. ಜೊತೆಕಾರ್ಯದರ್ಶಿ ಶೇಖ್ ಇಸಾಕ್ ಕಾರ್ಯಕ್ರಮ ನಿರೂಪಿಸಿದರು.

2026-28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಝಕರಿಯ ಜೋಕಟ್ಟೆ ಚೆಯರ್ಮೆನ್, ಸುಜಾಹ್ ಮಹಮ್ಮದ್ ಕಾರ್ಯಾಧ್ಯಕ್ಷ, ಮಹಮ್ಮದ್ ಆರಿಫ್ ಪಡುಬಿದ್ರಿ ಪ್ರಧಾನ ಕಾರ್ಯದರ್ಶಿ, ಝುಬೈರ್ ಬುಳೇರಿಕಟ್ಟೆ ಕೋಶಾಧಿಕಾರಿ, ಡಾ. ಮುಬಶ್ಶಿರ್, ವಿ.ಎಚ್. ಅಶ್ರಫ್, ಅಬೂಬಕರ್ ಪುತ್ತು ಉಪಾಧ್ಯಕ್ಷರು, ಶೇಖ್ ಇಸಾಕ್ ಎಡ್ವಕೇಟ್, ಅನ್ವರ್ ಹುಸೈನ್ ಜೊತೆ ಕಾರ್ಯದರ್ಶಿಗಳು, ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಮಹಮ್ಮದ್ ಶರೀಫ್ ಮೂಡಬಿದ್ರೆ, ಅಬೂಬಕರ್ ನೋಟರಿ, ಹನೀಫ್ ಪುತ್ತೂರು, ಮುಹ್ಸಿನ್ ಮೊಯ್ದಿನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು. ಮಹಮ್ಮದ್ ಫಾರೂಕ್ ಜುಬೈಲ್, ಮುಹ್ಸಿನ್ ಮೊಯ್ದಿನ್ ಹಾಗೂ ಬಶೀರ್ ಅಹ್ಮದ್ ಚುನಾವಣಾಧಿಕಾರಿಗಳಾಗಿ ಸಹಕರಿಸಿದರು. ಇದೇ ಸಂದರ್ಭ ಕಾರುಣ್ಯ ಯೋಜನೆ, ಕಂಪ್ಯೂಟರ್ ಬಸ್, ಕ್ಲಾತ್ ಬ್ಯಾಂಕ್, ಜಮಾಅತ್ ಸಮೀಕ್ಷೆ, ಮೆಡಿಕಲ್ ವೆಲ್ ನೆಸ್ ಯೋಜನೆಗಳಿಗೆ ಉಪಸಮಿತಿ ರಚಿಸಲಾಯಿತು.

Leave a Reply

Your email address will not be published. Required fields are marked *

error: Content is protected !!